ಶಿವಮೊಗ್ಗ: ನಗರದ ಕಂಟ್ರಿ ಕ್ಲಬ್ ಬಳಿಯ ಮನೆಯೊಂದರಲ್ಲಿ ಹೊರಗೆ ಇಟ್ಟಿದ್ದ ಶೂ ಒಳಗೆ ಅಡಗಿದ್ದ ಸುಮಾರು 4 ಅಡಿ ಉದ್ದದ ಕ್ಯಾಟ್ ಸ್ನೇಕ್ ಒಂದನ್ನು ಉರಗ ತಜ್ಞ ಸ್ನೇಕ್ ಕಿರಣ್ ಅವರು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಹೊಳೆ ಬಸ್‌ಸ್ಟಾಪ್‌ನ ಕಂಟ್ರಿ ಕ್ಲಬ್ ಬಳಿಯ ಮನೆಯಲ್ಲಿ, ರ್ಯಾಕ್ ಮೇಲೆ ಇಟ್ಟಿದ್ದ ಶೂ ಒಳಗೆ ಹಾವು ಅಡಗಿಕೊಂಡಿರುವುದನ್ನು ಮನೆಯವರು ಗಮನಿಸಿದ್ದರು. ತಕ್ಷಣವೇ ಅವರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದು, ಅವರು ಸ್ಥಳಕ್ಕೆ ಧಾವಿಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಿಸಿದ್ದಾರೆ.
Snake rescue