SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 26, 2024 SHIKARIPURA BANDH | ಸಿಎಂ ಸಿದ್ದರಾಮಯ್ಯರ ಪರವಾಗಿ ಇವತ್ತು ಶಿಕಾರಿಪುರ ಬಂದ್ ನಡೆಸಲಾಗುತ್ತಿದೆ.
ಸಿದ್ದರಾಮಯ್ಯರವರ ವಿರುದ್ಧ ವಿಪಕ್ಷಗಳು ಷಡ್ಯಂತ್ರ ನಡೆಸ್ತಿವೆ ಎಂದು ಆರೋಪಿಸಿ ಶಿಕಾರಿಪುರ ತಾಲೂಕು ಅಹಿಂದ ಒಕ್ಕೂಟ ದಿಂದ ಪ್ರತಿಭಟನೆ ನಡೆಸಿದ್ದಷ್ಟೆ ಅಲ್ಲದೆ ಬಂದ್ ನಡೆಸಿದೆ. ಈ ವೇಳೆ ಪ್ರತಿಭಟನೆಯ ವೇಳೇಯಲ್ಲಿ ಶಿಕಾರಿಪುರ ಪೇಟೆಯ ಅಂಗಡಿಗಳು ಬಂದ್ ಆಗಿದ್ದವು.
ಇನ್ನೂ ಬಂದ್ ಹಿನ್ನೆಲೆಯಲ್ಲಿ ಶಿಕಾರಿಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಆಹಿಂದ ಒಕ್ಕೂಟ ಕಾರ್ಯಕರ್ತರು ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ಪೇಟೆಯ ಪ್ರಮುಖ ಸರ್ಕಲ್‌ನಲ್ಲಿ ಪ್ರತಿಭಟನಾ ಜಾಥಾ ನಡೆಸಿದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ ಕ್ಷೇತ್ರದಲ್ಲಿಯೇ ಈ ಬಂದ್ ನಡೆದಿರುವುದು ಕುತೂಹಲ ಮೂಡಿಸಿದೆ. ಅಲ್ಲದೆ ಪ್ರತಿಭಟನೆಯ ವೇಳೆ ನಗರದ ಹಲವು ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿದ್ದರು.
ಶಿಕಾರಿಪುರ ಬಂದ್ ಮಲೆನಾಡು ಟುಡೆ ಫೋಟೋ