short news updates 112 Shivamogga ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರ ನೀಡುವ ಇವತ್ತಿನ ವರದಿ ಹೀಗಿದೆ. ಪೇಪರ್ ಟೌನ್, ಹೊಸಮನೆ ಮತ್ತು ಸಾಗರಪೇಟೆ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಪ್ರಮುಖ ಘಟನೆಗಳ ಮಾಹಿತಿ ಇಲ್ಲಿದೆ.
ಹೆಂಡತಿ & ಹೆಂಡತಿಯ ಅಣ್ಣನಿಂದ ಹಲ್ಲೆ !

ಜುಲೈ 15, 2025 ರಂದು ಭದ್ರಾವತಿಯಲ್ಲಿ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ತಮ್ಮ ಪತ್ನಿ ಮತ್ತು ಅವರ ಅಣ್ಣ ತಮ್ಮ ಮೇಲೆ ಹಲ್ಲೆ (Assault) ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣಕ್ಕೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿ ಸಂತ್ರಸ್ತನ ನೆರವಿಗೆ ಮುಂದಾಗಿದ್ಧಾರೆ. ಸ್ಥಳದಲ್ಲಿ ಆರೋಪಿಗಳು ಇಲ್ಲದ ಹಿನ್ನೆಲೆಯಲ್ಲಿ ವಿಚಾರವನ್ನು ಠಾಣೆಗೆ ವರ್ಗಾಯಿಸಿದ್ದಾರೆ.
ಚೀಟಿ ಹಣಕ್ಕಾಗಿ ಕಿರಿಕ್
ಭದ್ರಾವತಿಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಚೀಟಿ ಹಣದ ವಿಚಾರವಾಗಿ ಜಗಳ (Dispute) ನಡೆದಿದೆ. ಈ ಸಂಬಂಧ ಜಗಳ ತಾರಕಕ್ಕೇರಿ ಸ್ಥಳಕ್ಕೆ 112 ಪೊಲೀಸರು ದೌಡಾಯಿಸಿದ್ದಾರೆ. ಎರಡು ಕಡೆಯವರಿಂದ ಜಗಳ ಬಿಡಿಸಿ ಹಣದ ಸಮಸ್ಯೆಯನ್ನು ಸ್ಟೇಷನ್ನಲ್ಲಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ.


short news updates 112 Shivamogga ಗೇಟಿಗೆ ಅಡ್ಡಲಾಗಿ ನಿಲ್ಲಿಸಿದ ಕಾರ್
ಇತ್ತ ಭದ್ರಾವತಿಯ ಹೊಸಮನೆ (Hosamane) ಠಾಣಾ ವ್ಯಾಪ್ತಿಯಲ್ಲಿ ಕಾರ್ ಮಾಲೀಕನೊಬ್ಬ ತನ್ನ ಕಾರನ್ನು ಇನ್ನೊಬ್ಬರ ಮನೆಯ ಗೇಟ್ ಮುಂದೆ ನಿಲ್ಲಿಸಿ ತೆರಳಿದ್ದ. ಇದರಿಂದ ಮನೆಯವರಿಗೆ ಇಲ್ಲದ ಸಮಸ್ಯೆಯಾಗಿ, ಕೊನೆಗೆ ವಿಧಿಯಿಲ್ಲದೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ERV ಸಿಬ್ಬಂದಿ ಕಾರ್ ಮಾಲೀಕರಿಗೆ ಕರೆ ಮಾಡಲು ಪ್ರಯತ್ನಿಸಿದರೂ, ಸಂಪರ್ಕ ಸಾಧ್ಯವಾಗಲಿಲ್ಲ. ಹಾಗಾಗಿ ಮಾಹಿತಿಯನ್ನು ಸ್ಥಳೀಯ ಠಾಣೆಗೆ ರವಾನಿಸಿ, ಕಾರು ತೆರವಿಗೆ ಸೂಚಿಸಿದರು.
short news updates 112 Shivamogga ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ ಪತ್ತೆ
ಇತ್ತ ಸಾಗರ ಟೌನ್ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರಿಂದ ಬಾಲಕನೊಬ್ಬರ ಸೇಫ್ ಆಗಿದ್ದಾನೆ. ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ, ಇಲ್ಲೊಬ್ಬ ಬಾಲಕ ಊರಿಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿರುವುದಾಗಿ ತಿಳಿಸಿದ್ದಾರೆ. ಸ್ಥಳಕ್ಕೆ ತಲುಪಿದ ಸಿಬ್ಬಂದಿ ವಿದ್ಯಾರ್ಥಿಯ ವಿಚಾರಣೆ ನಡೆಸಿದಾಗ ಆತ ಹಾಸ್ಟೆಲ್ ವಿದ್ಯಾರ್ಥಿ (Hostel Student) ಎಂದು ಗೊತ್ತಾಗಿದೆ. ಈ ಸಂಬಂಧ ಹಾಸ್ಟೆಲ್ ವಾರ್ಡನ್‌ಗೆ (Warden) ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡ ಪೊಲೀಸರು ಬಾಲಕನನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. (ವೈಯಕ್ತಿಕ ವಿಚಾರಗಳು ಗೌಪ್ಯ)
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://malenadutoday.com/category/shivamogga/
ಇದನ್ನು ನೋಡಿ
View this post on Instagram
short news updates 112 Shivamogga Emergency Calls in Shivamogga Assault, Disputes, and Public Assistance Read the short news updates.
ಶಿವಮೊಗ್ಗ, 112 ಕರೆ, ಪೇಪರ್ ಟೌನ್, ಹೊಸಮನೆ, ಸಾಗರಪೇಟೆ, ಹಲ್ಲೆ, ಜಗಳ, ಚೀಟಿ ಹಣ, ಹಾಸ್ಟೆಲ್ ವಿದ್ಯಾರ್ಥಿ, ಪೊಲೀಸ್ ಸಹಾಯ, ತುರ್ತು ಸೇವೆ, ದೂರು, Shivamogga, 112 calls, Paper Town, Hosamane, Sagarapete, assault, dispute, chit fund, hostel student, police assistance, emergency services, complaint , #Shivamogga #112Emergency #PoliceNews #Karnataka #PublicSafety #EmergencyCalls #LawAndOrder
