SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 14, 2024 shimoga police fast news
ಹಲ್ಲೆ ಮಾಡಲು ಬಂದ ಗುಂಪು
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಓಲ್ಡ್ ಟೌನ್ ಪೊಲೀಸ್ ಠಾಣೆ ಲಿಮಿಟ್‌ನಲ್ಲಿ ಗುಂಪು ಒಂದು ವ್ಯಕ್ತಿಯೊಬ್ಬನ ಮೇಲೆ ಅಟ್ಯಾಕ್ ಮಾಡಿದೆ. ಈ ವೇಳೆ 112 ಪೊಲೀಸರಿಗೆ ತಕ್ಷಣವೇ ಮಾಹಿತಿ ರವಾನೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ಹಲ್ಲೆಗೊಳಗಾದ ವ್ಯಕ್ತಿಯನ್ನು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸ್ ಠಾಣೆ ಸಿಬ್ಬಂದಿ ಪ್ರಕರಣದ ವಿಚಾರಣೆ ನಡೆಸ್ತಿದ್ದಾರೆ.
ಬಾಲಕಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿ ಆಟೋ ಪಲ್ಟಿ
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿದ್ದ ಬಾಲಕಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಮುಂದಾದಾಗ ಆಟೋವೊಂದು ಪಲ್ಟಿಯಾಗಿದೆ. ಘಟನೆಯಲ್ಲಿ ಆಟೋ ಚಾಲಕ ಹಾಗೂ ಬಾಲಕಿಗೆ ಗಾಯವಾಗಿದೆ. ಈ ಸಂಬಂಧ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನ ಆಸ್ಪತ್ರೆ ದಾಖಲಿಸಿ ವಾಹನವನ್ನ ಸ್ಥಳಾಂತರ ಮಾಡಿದ್ದಾರೆ.
ಕಾರು ಬೈಕ್ ನಡುವೆ ಆಕ್ಸಿಡೆಂಟ್
ಇತ್ತ ಸೊರಬ ಠಾಣಾ ವ್ಯಾಪ್ತಿಯಲ್ಲಿ ಕಾರು & ಬೈಕ್ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ ಬೈಕ್‌ನಲ್ಲಿದ್ದ ಸವಾರರಿಗೆ ಗಾಯಗಳಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಸೊರಬ ಪೊಲೀಸ್ ಠಾಣೆ ಪೊಲೀಸರು ಬೈಕ್ ಸವಾರರನ್ನ ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದಾರೆ. ಆ ಬಳಿಕ ವಾಹನಗಳನ್ನ ಠಾಣೆಗೆ ಕಳುಹಿಸಿಕೊಟ್ಟು ಠಾಣೆಗೆ ಮಾಹಿತಿ ನೀಡಿದ್ದಾರೆ.
ಎಣ್ಣೆ ಹೊಡೆದು ತಾಯಿಯನ್ನ ಹೊರಹಾಕಿದ ಮಗ
ಅತ್ತ ಭದ್ರಾವತಿ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ಮಗರಾಯ ಒಬ್ಬ ಕುಡಿದ ನಶೆಯಲ್ಲಿ ತಾಯಿಯನ್ನ ಮನೆಯಿಂದ ಹೊರಹಾಕಿದ ಘಟನೆ ನಡೆದಿದೆ. ಈ ಸಂಬಂಧ ವಿಷಯ ತಿಳಿದು ಸ್ಥಳಕ್ಕೆ ತೆರಳಿದ 112 ಪೊಲೀಸರು ತಾಯಿಗೆ ರಕ್ಷಣೆ ನೀಡಲು ಮುಂದಾಗಿದ್ದಾರೆ. ಮಗನಿಗೆ ಬಾಗಿಲು ತೆರೆಯುವಂತೆ ಪೊಲೀಸರು ಸೂಚಿಸಿದರೂ ತೆರೆಯದ ಕಾರಣ ಸಂತ್ರಸ್ತ ತಾಯಿಗೆ ಪೊಲೀಸ್ ಠಾಣೆಗೆ ದೂರು ನೀಡಲು ಸೂಚಿಸಿದ್ದಾರೆ. ಸದ್ಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಶವ ಸಂಸ್ಕಾರದ ವೇಳೆ ಆಸ್ತಿಗಾಗಿ ಗಲಾಟೆ
ಇನ್ನೂ ಶಿವಮೊಗ್ಗದ ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಶವ ಸಂಸ್ಕಾರದ ಸಮಯದಲ್ಲಿ ಆಸ್ತಿ ವಿಚಾರವಾಗಿ ಗಲಾಟೆಯಾಗಿದೆ. ಈ ಬಗ್ಗೆ ವಿಚಾರ ತಿಳಿದು ಸ್ಥಳಕ್ಕೆ ಪೊಲೀಸರು ಆಗಮನಿಸಿದ್ದಾರೆ. ಆ ಬಳಿಕ ಎರಡು ಕಡೆಯವರಿಗೆ ಗಲಾಟೆ ಮಾಡದೆ ಮೊದಲು ಶವ ಸಂಸ್ಕಾರ ಕಾರ್ಯ ಮುಗಿಸುವಂತೆ ಸೂಚಿಸಿದ್ದಾರೆ. ಆ ಬಳಿಕ ಶವಸಂಸ್ಕಾರ ಮುಂದುವರಿದಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/FxYXrxP9Vbq6Xd5jML5sQN
TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಗೂಗಲ್ ನ್ಯೂಸ್ ಜಸ್ಟ್ ಫಾಲೋಕೊಡಿ https://news.google.com/publications/CAAqBwgKMLWipQwwx5q0BA?ceid=IN:en&oc=3