SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಸುದ್ದಿ ಒಂದು |
ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದಲ್ಲಿನ ಜೇನು ಕುರುಬ ಮಾವುತರಿಗೆ ST ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಇವತ್ತು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಇದುವರೆಗೂ ಸಕ್ರೆಬೈಲ್ ಬಿಡಾರದ ಸಿಬ್ಬಂದಿಗಳಿಗೆ ಸರ್ಕಾರದಿಂದ ಸಿಗಬೇಕಾದ ಪ್ರಮಾಣಪತ್ರ, ಆಧಾರ್ ರೇಷನ್ ಕಾರ್ಡ್ ಸಿಕ್ಕಿಲ್ಲ ಎಂದು ಆಗ್ರಹಿಸಿರುವ ಪ್ರತಿಭಟನಾಕಾರರು ರಾಜ್ಯ ಅಸಂಘಟಿತ ಕಾರ್ಮಿಕ ಸಂಘದ ಅಡಿಯಲ್ಲಿ ಪ್ರತಿಭಟನೆ ನಡೆಸಿದರು.
ಸುದ್ದಿ ಎರಡು |
ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆಯಲ್ಲಿ ರೈಲ್ವೆ ಪ್ಲೈಓವರ್ ಕಾಮಗಾರಿ ಆದ ಬಳಿಕವೂ ಅದರ ಅಡಿಯಲ್ಲಿರುವ ರಸ್ತೆಯನ್ನು ರಿಪೇರಿ ಮಾಡಿಲ್ಲ ಹಾಗೂ ಕಾಮಗಾರಿಯಿಂದ ಆಗುತ್ತಿರುವ ದೂಳು ಹಾಗೂ ಹೊಗೆ ಮತ್ತು ವಿವಿಧ ಸಮಸ್ಯೆಗಳನ್ನ ಬಗೆಹರಿಸತ್ತಿಲ್ಲ ಎಂದು ಆರೋಪಿಸಿ ಸ್ಥಳೀಯರು ಪ್ಲೈ ಓವರ್ ರಸ್ತೆಗೆ ಅಡ್ಡಲಾಗಿ ಕಲ್ಲಿಟ್ಟು ಪ್ರತಿಭಟನೆ ನಡೆಸಿದರು. ಹೊನ್ನಾಳಿ ರೈಲ್ವೆ ಬ್ರಿಡ್ಜ್ ಕೆಳಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಇದರಲ್ಲಿಯೇ ಜನರು ಓಡಾಡಬೇಕಾಗಿದೆ. ಇದನ್ನ ಯಾರು ಸಹ ಪರಿಹರಿಸುತ್ತಿಲ್ಲ ಎಂಧು ಸ್ಥಳೀಯರು ದೂರಿದ್ದಾರೆ.
ಸುದ್ದಿ ಮೂರು |
ದಲಿತರ ಮೇಲೀನ ದೌರ್ಜನ್ಯ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ಠಾಣೆಯನ್ನ ತೆರೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ದಲಿತರ ಮೇಲಿನ ದೌರ್ಜನ್ಯ ಪ್ರಕರಣದ ತನಿಖೆ ವಿಳಂಬವಾಗುತ್ತಿದ್ದು, ಸೂಕ್ತ ನ್ಯಾಯ ಸಿಗುತ್ತಿಲ್ಲ ಹೀಗಾಗಿ ಜಿಲ್ಲೆಗೊಂದು ವಿಶೇಷ ಠಾಣೆಯನ್ನು ನಿರ್ಮಿಸಬೇಕು ಎಂದು ಸಂಘಟನೆಯ ಸದಸ್ಯರು ಆಗ್ರಹಿಸಿದರು.
ಸುದ್ದಿ ನಾಲ್ಕು |
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬದ ಬಗ್ಗೆ ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ನೀಡಿರುವ ಹೇಳಿಕೆ ಅಕ್ಷಮ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಆಕ್ರೋಶ ಹೊರಹಾಕಿದ್ದಾರೆ. ಬೈರತಿ ಸುರೇಶ್, ಯಡಿಯೂರಪ್ಪ ಅವರ ಪತ್ನಿಯ ಸಾವನ್ನೇ ತನ್ನ ಟೀಕೆಗೆ ಬಳಸಿಕೊಂಡಿರುವುದು ಮನುಷ್ಯತ್ವ ಇಲ್ಲದ ರಾಜಕಾರಣ ಎಂದು ಟೀಕಿಸಿದ್ಧಾರೆ. ಅಲ್ಲದೆ ಬೈರತಿ ಸುರೇಶ್ ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು ಯಡಿಯೂರಪ್ಪ ಮತ್ತು ಅವರ ಕುಟುಂಬದ ಕ್ಷಮೆ ಕೇಳಬೇಕು ಎಂದಿದ್ದಾರೆ.
ಸುದ್ದಿ ಐದು |
ಶರಾವತಿ ನೀರನ್ನ ಬೆಂಗಳೂರು ಕುಡಿಯುವ ನೀರು ಪೂರೈಕೆ ಯೋಜನೆಗೆ ಹರಿಸುವ ಪ್ರಸ್ತಾಪ ಇಲ್ಲ ಅಂತಾ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರವರು ಈಗಾಗಲೇ ಹೇಳಿದ್ದಾರೆ. ಈ ನಡುವೆ ಈ ಯೋಜನೆ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಶಾಶ್ವತವಾಗಿ ರದ್ದುಪಡಿಸಿರುವುದಾಗಿ ರಾಜ್ಯ ಸರ್ಕಾರ ತನ್ನ ಗೆಜೆಟ್ನಲ್ಲಿ ಪ್ರಕಟಿಸಬೇಕು ಎಂದು ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟ ಒತ್ತಾಯಿಸಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕುರಿತು ಸಾಗರ ಶಾಸಕರು ಪ್ರಸ್ತಾಪಿಸಿಲ್ಲ ಆ ಬಗ್ಗೆ ಅವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಒಕ್ಕೂಟದ ಪ್ರಮುಖರಾದ ಅಖಿಲೇಶ್ ಚಿಪ್ಪಳಿ ಆಗ್ರಹಿಸಿದ್ದಾರೆ.
SUMMARY | shivamogga top news
KEYWORDS | shivamogga top news