Shivamogga today : ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿದ್ದು, ಜನಸಾಗರವೇ ಹರಿದು ಬರುತ್ತಿದೆ. ಮೆರವಣಿಗೆಯ ಆರಂಭದಲ್ಲಿ, ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಅವರು ಕೋಟೆ ರಸ್ತೆಯಲ್ಲಿ ಗಣಪತಿಗೆ ಹೂವಿನ ಹಾರ ಹಾಕಿ ನಮಸ್ಕರಿಸಿದರು. ನಂತರ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಅವರು, ಡೊಳ್ಳಿನ ತಾಳಕ್ಕೆ ಕುಣಿದರು. ಮಹಿಳೆಯರೊಂದಿಗೆ ಹೆಜ್ಜೆ ಹಾಕುತ್ತಾ ಘೋಷಣೆಗಳನ್ನು ಕೂಗಿದರು. ಶ್ರೀಕಾಂತ್ ಮೆರವಣಿಗೆ ಸಮೀಪಿಸುತ್ತಿದ್ದಂತೆ ನೂರಾರು ಯುವಕ-ಯುವತಿಯರು ಅವರನ್ನು ಸುತ್ತುವರೆದು ಕೈ ಕುಲುಕಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ, ಮೆರವಣಿಗೆಯಲ್ಲಿ ಜನರು ಶಾಂತಿಯುತವಾಗಿ ಮತ್ತು ಸಂತೋಷದಿಂದ ಭಾಗವಹಿಸುವಂತೆ ಶ್ರೀಕಾಂತ್ ಮನವಿ ಮಾಡಿದರು.

Shivamogga today ಈ ಬಾರಿಯೂ ಹೆಣ್ಣುಮಕ್ಕಳೇ ಸ್ಟ್ರಾಂಗ್ ಗುರು!
ಕಳೆದ ಐದಾರು ವರ್ಷಗಳಿಂದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ‘ಗಲಾಟೆ ಗಣಪ’ ಎಂಬ ಅಪವಾದದಿಂದ ಸಂಪೂರ್ಣ ಮುಕ್ತವಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಗಣಪತಿ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಸಂತೋಷದಿಂದ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲರ ಮುಖದಲ್ಲೂ ಸಂತೋಷ ಮತ್ತು ಸಂಭ್ರಮ ಮನೆ ಮಾಡಿರುತ್ತದೆ. ಬೆಳಿಗ್ಗೆ 11 ಗಂಟೆಗೆ ರಾಜಬೀದಿಯಲ್ಲಿ ಪ್ರಾರಂಭವಾಗುವ ಗಣೇಶ ಮೆರವಣಿಗೆಯ ಉದ್ದಕ್ಕೂ ಯುವಕ-ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಇಂದು ಬೆಳಿಗ್ಗೆಯಿಂದ ಸಾಗುತ್ತಿರುವ ಮೆರವಣಿಗೆಯಲ್ಲಿ ಮಹಿಳೆಯರೇ ಕುಣಿದು ಕುಪ್ಪಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
Shivamogga today ಸಮರ್ಪಣಾ ಸಂಸ್ಥೆಯಿಂದ ಡಿಜೆ – ಸಂಜೆಯ ರಂಗಿಗೆ ಸಜ್ಜಾದ ವೇದಿಕೆ
ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ವೇಳೆ ಸಂಜೆ ಹೊತ್ತಿಗೆ ಗೋಪಿ ವೃತ್ತದಲ್ಲಿ ಯುವ ಸಮೂಹದ ಉತ್ಸಾಹ ಹೆಚ್ಚಿರುತ್ತದೆ. ಈ ಬಾರಿ ಗಣಪತಿಗೆ ಸಂಬಂಧಿಸಿದ ಪಾಶ್ಚಿಮಾತ್ಯ ಶೈಲಿಯ (Western) ಡಿಜೆ ಹಾಡುಗಳು ಸಿದ್ಧವಾಗಿದ್ದು, ಯುವಕ-ಯುವತಿಯರು ಕುಣಿದು ಕುಪ್ಪಳಿಸಲಿದ್ದಾರೆ. ಗೋಪಿ ವೃತ್ತದ ಉತ್ಸಾಹಕ್ಕೆ ಕಾರಣ ಸಮರ್ಪಣಾ ತಂಡದ ಉತ್ಸಾಹಿ ಯುವಕರು. ಶಾಮಿಯಾನ, ನೃತ್ಯ, ಅಡುಗೆ ಮತ್ತು ಧ್ವನಿ ವ್ಯವಸ್ಥೆಯಲ್ಲಿ ಗುರುತಿಸಿಕೊಂಡಿರುವ ಈ ತಂಡವು ಕಳೆದ ಐದಾರು ವರ್ಷಗಳಿಂದ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಡಿಜೆ ಸೌಂಡ್ಸ್ ವ್ಯವಸ್ಥೆಯನ್ನು ಮಾಡುತ್ತಿದೆ. ಡಿಜೆಯಿಂದಾಗಿ ಯುವ ಸಮೂಹವು ಉಲ್ಲಾಸ ಮತ್ತು ಉತ್ಸಾಹದಿಂದ ಹೆಜ್ಜೆ ಹಾಕುತ್ತದೆ. ಈ ಬಾರಿಯೂ ಗೋಪಿ ವೃತ್ತದಲ್ಲಿ ಡಿಜೆ ಸದ್ದು ಜೋರಾಗಿದ್ದು, ಯುವಕ-ಯುವತಿಯರಿಗಾಗಿ ಪ್ರತ್ಯೇಕ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ.