SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 27, 2024 SHIVAMOGGA POWER CUT | ಮೆಗ್ಗಾನ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೆಸ್ಕಾಂ ನಿರ್ವಹಣಾ ಕಾಮಗಾರಿ ಕೈಗೊಂಡಿದೆ. ಈ ಕಾರಣಕ್ಕೆ ನಾಳೆ ಅಂದರೆ ಸೆಪ್ಟೆಂಬರ್ 28 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಈ ಪ್ರದೇಶಗಳಲ್ಲಿ POWER CUT ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
SHIVAMOGGA POWER CUT
ಹೊಸಮನೆ, ಹೊಸಮನೆ ಛಾನಲ್ ಏರಿಯಾ, ಶರಾವತಿನಗರ ಎ ಮತ್ತು ಬಿ ಬ್ಲಾಕ್, ಆಯುರ್ವೇದ ಕಾಲೇಜು, ಕುವೆಂಪು ರಸ್ತೆ, ಸಾಗರ ರಸ್ತೆ, ಆಯನೂರು ಗೇಟ್, ಆದಿಚುಂಚನಗಿರಿ ಸುಮುದಾಯ ಭವನ, ಯುನಿಟಿ ಆಸ್ಪತ್ರೆ, ಜೈಲ್ ವೃತ್ತ, ಸುಬ್ಬಯ್ಯ ಆಸ್ಪತ್ರೆ, ಜೈಲ್ ರಸ್ತೆ, ಸತ್ಯಂ ಫೋರ್‌ವಿಂಗ್ಸ್, ದುರ್ಗಿಗುಡಿ, ಎ.ಆರ್.ಬಿ. ಕಾಲೋನಿ, ಅಶೋಕನಗರ, ಪಂಪನಗರ, ರಂಗನಾಥ ಬಡಾವಣೆ, ಬಿ.ಎಸ್.ಎನ್.ಎಲ್.ಭವನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಬೊಮ್ಮನಕಟ್ಟೆ
ಪರಿವರ್ತಕ ಸ್ಥಳಾಂತರ ಕಾಮಗಾರಿ ಇರುವುದರಿಂದ ಸೆ.28 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಬೊಮ್ಮನಕಟ್ಟೆ ಸಿ ರಿಂದ ಎಫ್ ಬ್ಲಾಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.