shivamogga news : ಮಂಜುನಾಥ್ ರಾವ್ ಮನೆಗೆ ವಿಜಯೇಂದ್ರ ಭೇಟಿ | ಕುಟುಂಸ್ಥರಿಗೆ ಸಾಂತ್ವನ
shivamogga news : ಪೆಹಲ್ಗಾಮ್‍ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದ ಶಿವಮೊಗ್ಗ ನಗರದ ಮಂಜುನಾಥ್ ರಾವ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರುಇತ್ತೀಚೆಗೆ ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರ ಅಟ್ಟಹಾಸಕ್ಕೆ ಭಾರತೀಯ 26 ಜನರ ಹತ್ಯೆ ಆಯಿತು.ಶಿವಮೊಗ್ಗದ ಮಂಜುನಾಥ್ ಸಹ ದಾಳಿಯಲ್ಲಿ ಮೃತರಾದರು. ನಾನೂ ಕೂಡಾ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಬೇಕು ಅಂದುಕೊಂಡಿದ್ದೆ ಆದರೆ ಕಾರಣಾಂತರಗಳಿಂದ ಬರಲು ಆಗಿರಲಿಲ್ಲ. ಹಾಗಾಗಿ ಇವತ್ತು ಬಂದು ಸಾಂತ್ವನ ಹೇಳಿದ್ದೇನೆ. ಆ ತಾಯಿ ಆ ಕ್ಷಣದಲ್ಲಿ ನಡೆದುಕೊಂಡ ರೀತಿ ಎಲ್ಲರಿಗೂ ಪ್ರೇರಣೆ.ಆ ಸಂದರ್ಭವನ್ನು ತಾಯಿ,ಮಗ ಹೇಗೆ ಎದುರಿಸಿದರು ಎಂಬುವುದನ್ನು ನಾವು ನೋಡಿದ್ದೇವೆ. ಈ ದುಷ್ಟ ಉಗ್ರರ ದಾಳಿಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಆಪರೇಷನ್ ಸಿಂಧೂರ್ ಮೂಲಕ ದಿಟ್ಟ ಉತ್ತರ ಕೊಟ್ಟಿದ್ದಾರೆ. ನಾವೆಲ್ಲರೂ ಸಹ ಇವರೊಂದಿಗೆ ಇರುತ್ತೇವೆ ಎಂದರು.