ನವದೆಹಲಿ, ಆಗಸ್ಟ್ 7: malenadutoday news / ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಳಿ ಸಂಸದ ಬಿವೈ ರಾಘವೇಂದ್ರರವರು ಮೂರು ಮನವಿಗಳನ್ನು ಮುಂದಿಟ್ಟಿದ್ದಾರೆ. ಇದರ ಬೆನ್ನಲ್ಲೆ ಇನ್ನೊಂದೆಡೆ ಶಿವಮೊಗ್ಗ ಹರಿಹರ ರೈಲ್ವೆ ಮಾರ್ಗದ ವಿಳಂಬಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಕೇಂದ್ರ ಸಚಿವರು ಪ್ರಕಟಣೆಯನ್ನು ನೀಡಿದ್ದಾರೆ.
ಹೌದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನಡುವಿನ ಒಪ್ಪಂದ (agreement) ವಿವಾದದಿಂದಾಗಿ ಶಿವಮೊಗ್ಗ-ಹರಿಹರ ನಡುವಿನ ಮಹತ್ವಾಕಾಂಕ್ಷೆಯ (ambitious) ರೈಲ್ವೆ ಯೋಜನೆ ಸ್ಥಗಿತಗೊಂಡಿದೆ ಎಂದು ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟನೆ ನೀಡಿದ್ದಾರೆ.ರಾಜ್ಯ ಸರ್ಕಾರವು ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಉಚಿತವಾಗಿ ಒದಗಿಸಲು ಮತ್ತು ಯೋಜನಾ ವೆಚ್ಚದ ಶೇ 50ರಷ್ಟು ಮೊತ್ತವನ್ನು ಭರಿಸಲು ನಿರಾಕರಿಸಿದ ಕಾರಣದಿಂದ ಈ ಸ್ಥಿತಿ ಉಂಟಾಗಿದೆ ಎಂದಿದ್ದಾರೆ.

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ರವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 79 ಕಿ.ಮೀ. ಉದ್ದದ ಈ ಯೋಜನೆಯ ಅಂದಾಜು ವೆಚ್ಚ ₹832 ಕೋಟಿ ಆಗಿದೆ. ಈ ಯೋಜನೆಗೆ ಅಗತ್ಯವಾದ 488 ಹೆಕ್ಟೇರ್ (hectare) ಭೂಮಿಯನ್ನು ಉಚಿತವಾಗಿ ನೀಡಬೇಕು ಮತ್ತು ಯೋಜನಾ ವೆಚ್ಚದ ಅರ್ಧದಷ್ಟು ಭಾಗವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂಬ ಒಪ್ಪಂದ ಆಗಿದೆ. ಆದರೆ ಇದರಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಸ್ಥಗಿತಗೊಂಡಿದೆ ಎಂದಿದ್ದಾರೆ.
Shivamogga Harihar railway project