SHIVAMOGGA | MALENADUTODAY NEWS | ಮಲೆನಾಡು ಟುಡೆ Oct 15, 2024
ಲಾರಿ ಡಿಕ್ಕಿ, ಬೈಕ್ ಹಿಂಬದಿ ಸವಾರ ಸಾವು
ತೀರ್ಥಹಳ್ಳಿ | ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಸಮೀಪ ಸೋಮೇಶ್ವರ ತಿರುವಿನ ಬಳಿ ನಡೆದಿದೆ. ಮೇಲಿನಕುರುವಳ್ಳಿ ನಿವಾಸಿ ಕಾರ್ತಿಕೇಯ (34) ಮೃತಪಟ್ಟವ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ನಿಲ್ದಾಣದಲ್ಲಿ ಮಹಿಳೆಗೆ ಶಾಕ್
ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ದಾಖಲಾಗಿದೆ. ಟಿಕೆಟ್‌ಗೆ ತೋರಿಸಲು ಆಧಾರ್ ಕಾರ್ಡ್‌ಗಾಗಿ ವ್ಯಾನಿಟಿ ಬ್ಯಾಗ್ ಚೆಕ್ ಮಾಡಿದಾಗ ಮಹಿಳೆಗೆ ಅದರಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿದೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬಂದಿದ್ದ ಮಹಿಳೆ ವಾಪಸ್ ಶಿಕಾರಿಪುರಕ್ಕೆ ಹೋಗುವ ಸಲುವಾಗಿ ಬಸ್ ಹತ್ತುವಾಗ ಅವರ ಚಿನ್ನಾಭರಣವನ್ನ ಕಳ್ಳತನ ಮಾಡಲಾಗಿದೆ.
ದೇವಾಲಯದ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಮಾಯ
ವಿಜಯ ದಶಮಿಯ ದಿನ ಪೂಜೆ ಮಾಡಿ ಊರಿನ ದೇವಾಲಯದ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್‌ವೊಂದು ಕಳುವಾಗಿರವ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.ಶಿವಮೊಗ್ಗ ತಾಲೂಕು ಆಯನೂರು – ಹಾರನಹಳ್ಳಿ ರಸ್ತೆಯ ನರಸಿಂಹ ದೇವಸ್ಥಾನದ ಮುಂಭಾಗ ಘಟನೆ ಸಂಭವಿಸಿದೆ.
SUMMARY | Shivamogga Fast news Shivamogga Fast News, Thirthahalli Taluk, Someshwara, KSRTC Bus Stand, Shikaripura, Shivamogga District, Ayanur, Kunsi Police Station
KEYWORDS | Shivamogga Fast News, Thirthahalli Taluk, Someshwara, KSRTC Bus Stand, Shikaripura, Shivamogga District, Ayanur, Kumsi Police Station