DharmasthalaCase ಶಿವಮೊಗ್ಗ : ಧರ್ಮಸ್ಥಳದ ‘ಬುರುಡೆ’ ಪ್ರಕರಣದಲ್ಲಿ ಬಂಧಿತನಾಗಿರುವ ‘ಮಾಸ್ಕ್ ಮ್ಯಾನ್’ ಅಲಿಯಾಸ್ ಚಿನ್ನಯ್ಯನನ್ನು ಇಂದು ಬೆಳಿಗ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ವಿಶೇಷ ತನಿಖಾ ತಂಡ ಬೆಳ್ತಂಗಡಿಗೆ ಕರೆದೊಯ್ದಿದೆ. ಸುರಕ್ಷತೆಯ ಕಾರಣಗಳಿಂದ ಸೆಪ್ಟೆಂಬರ್ 6 ರಂದು ಚಿನ್ನಯ್ಯನನ್ನು ಶಿವಮೊಗ್ಗದ ಜೈಲಿಗೆ ವರ್ಗಾಯಿಸಲಾಗಿತ್ತು.
ಸೋಗಾನೆ ಬಳಿ ಇರುವ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬೆಳಿಗ್ಗೆ ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಇಂದು ಮಧ್ಯಾಹ್ನ ಬೆಳ್ತಂಗಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಲಾಗುತ್ತಿದೆ. ಶಿವಮೊಗ್ಗ ಜೈಲಿನ ಕಾವೇರಿ ಬ್ಲಾಕ್‌ನಲ್ಲಿ ಚಿನ್ನಯ್ಯನನ್ನು ಇರಿಸಲಾಗಿತ್ತು. ಈ ಘಟನೆಯು ರಾಜ್ಯಾದ್ಯಂತ ಗಮನ ಸೆಳೆದಿದ್ದು, ತನಿಖೆಯ ಮುಂದಿನ ಹಂತಗಳಿಗೆ ಮಹತ್ವದ್ದಾಗಿದೆ.