Shivamogga Arecanut Auction: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ 3200 ಅಡಿಕೆ ಮರಗಳ ಫಸಲು ಹರಾಜು: ಆಸಕ್ತರಿಗೆ ಆಹ್ವಾನ
Shivamogga Arecanut Auction ಶಿವಮೊಗ್ಗ : ಕೃಷಿ ಮತ್ತು ತೋಟಗಾರಿಕೆ ಸಂಶೋದನಾ ಕೇಂದ್ರ ನಗರದ ಹೊನ್ನಾವಿಲೆ ಕೇಂದ್ರದಲ್ಲಿ ಜುಲೈ 21 ರಂದು “ಡಿ, ಇ, ಮತ್ತು ಎಲ್” ತಾಕುವಿನಲ್ಲಿರುವ ಸುಮಾರು 3200 ಅಡಿಕೆ ಮರಗಳಲ್ಲಿರುವ ಫಸಲನ್ನು ನಿರ್ಧಿಷ್ಟ ಅವಧಿಗೆ ಬಹಿರಂಗ ಹರಾಜು ಮುಂದಾಗಿದೆ, ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ಕೃಷಿ ಮತ್ತು ತೋಟಗಾರಿಕೆ ಸಂಶೋದನಾ ಕೇಂದ್ರ ಕ್ಷೇತ್ರಾಧೀಕ್ಷರು ತಿಳಿಸಿದ್ದಾರೆ.
ಬೆಳಿಗ್ಗೆ 10: 30 ಕ್ಕೆ ಟೆಂಡರ್ ಲಕೋಟೆ ಸಲ್ಲಿಸಿ, ನಂತರ 11:30 ಕ್ಕೆ ಹರಾಜನ್ನು ಕೂಗಲಾಗುತ್ತದೆ. ಯಾರು ಹೆಚ್ಚಿನ ಬೆಲೆಗೆ ಒಪ್ಪಿಕೊಳ್ಳುತ್ತಾರೂ ಅವರು ವಿಲೇವಾರಿಗೆ ಪರಿಗಣಿಸಲಾಗುವುದು. ಆದರೆ ಹರಾಜಿಗೆ ಭಾಗಿಯಾಗುವವರು ಈ ಕೆಳಗಿನ ಷರತ್ತುಗಳಿಗೆ ಒಪ್ಪಿ ಹರಾಜಿಗೆ ಭಾಗಿಯಾಗಬೇಕು ಎಂದು ಇಲಾಖೆ ತಿಳಿಸಿದೆ

Shivamogga Arecanut Auction: ಹರಾಜಿನಲ್ಲಿ ಭಾಗವಹಿಸಲು ಪ್ರಮುಖ ಷರತ್ತುಗಳು
ಟೆಂಡರ್ ಫಾರಂ ಮತ್ತು ಠೇವಣಿ: ಟೆಂಡರ್ ಫಾರಂಗಳನ್ನು ಜುಲೈ 21 ರಂದು ಕಚೇರಿ ಸಮಯದಲ್ಲಿಪಡೆಯಬಹುದು. ಮೊಹರಾದ ಟೆಂಡರ್ ಜೊತೆಗೆ 25 ಸಾವಿರ ಠೇವಣಿಯನ್ನು ಕಚೇರಿಯಲ್ಲಿ ನಗದು ರೂಪದಲ್ಲಿ ಪಾವತಿಸಿ ಹರಾಜಿನಲ್ಲಿ ಭಾಗವಹಿಸಬಹುದು. ಠೇವಣಿ ಇಲ್ಲದ ಟೆಂಡರ್‌ಗಳನ್ನು ತಿರಸ್ಕರಿಸಲಾಗುವುದು. ಟೆಂಡರ್‌ನಲ್ಲಿ ನಮೂದಿಸುವ ಬೆಲೆಯನ್ನು ಅಕ್ಷರಗಳಲ್ಲಿ ಮತ್ತು ಅಂಕಿಗಳಲ್ಲಿ ಬರೆಯಬೇಕು. ಮೊಹರಾದ ಕವರ್‌ಗಳ ಮೇಲೆ “ಹಸಿ ಅಡಿಕೆ ಕಾಯಿಯ ಉತ್ಪನ್ನವನ್ನು ನಿರ್ದಿಷ್ಟ ಅವಧಿಗೆ ಕಟಾವು ಮಾಡಿಕೊಳ್ಳಲು ಟೆಂಡರ್” ಎಂದು ನಮೂದಿಸಬೇಕು.
Shivamogga Arecanut Auction ಬಿಡ್ಡುದಾರರಿಗೆ ಠೇವಣಿ: ಬಿಡ್ಡುದಾರರು ಸಹ ₹25,000/- ಗಳನ್ನು ನಗದು ರೂಪದಲ್ಲಿ ಠೇವಣಿಯಾಗಿ ಪಾವತಿಸಿ ಟೆಂಡರ್ ಹಾಗೂ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು.
ಹರಾಜು ಮುಗಿದ ಕೂಡಲೇ ಅತಿ ಹೆಚ್ಚು ಬಿಡ್ಡುದಾರರು ಠೇವಣಿ ಹಣವನ್ನು ಹೊರತುಪಡಿಸಿ, ಹರಾಜಿನ ಒಟ್ಟು ಮೊತ್ತದ ಅರ್ಧದಷ್ಟು ಹಣವನ್ನು ಸ್ಥಳದಲ್ಲಿಯೇ ಪಾವತಿಸಬೇಕು. ಉಳಿದ ಅರ್ಧದಷ್ಟು ಹಣವನ್ನು ಹರಾಜು ನಡೆದ ದಿನದಿಂದ 7 ದಿನಗಳೊಳಗೆ ಪಾವತಿಸಬೇಕು. ತಪ್ಪಿದಲ್ಲಿ ಠೇವಣಿ ಹಣ ಮುಟ್ಟುಗೋಲು ಹಾಕಿಕೊಳ್ಳುವುದಲ್ಲದೆ, ಎರಡನೇ ಅತಿ ಹೆಚ್ಚು ಬಿಡ್ಡುದಾರರಿಗೆ ಉಂಟಾಗುವ ನಷ್ಟವನ್ನು ಮೊದಲ ಬಿಡ್ಡುದಾರರೇ ಭರಿಸಬೇಕಾಗುತ್ತದೆ.
ಹರಾಜಿನಲ್ಲಿ ಅನುತ್ತೀರ್ಣರಾದ ಬಿಡ್ಡುದಾರರ ಠೇವಣಿ ಹಣವನ್ನು ಹರಾಜು ಮುಗಿದ ನಂತರ ಹಿಂದಿರುಗಿಸಲಾಗುವುದು. ಯಶಸ್ವಿ ಬಿಡ್ಡುದಾರರ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಯಾವುದೇ ಕಾರಣ ನೀಡದೆ ಟೆಂಡರ್ ಅಥವಾ ಹರಾಜನ್ನು ಸ್ವೀಕರಿಸುವ, ತಿರಸ್ಕರಿಸುವ ಅಥವಾ ಮುಂದೂಡುವ ಹಕ್ಕನ್ನು ಕಾದಿರಿಸಿಕೊಂಡಿದೆ.
ಹರಾಜು ಮುಗಿದ ನಂತರ ನೈಸರ್ಗಿಕ ವಿಕೋಪ, ಕಳ್ಳತನ ಅಥವಾ ಇತರೆ ಯಾವುದೇ ಕಾರಣದಿಂದ ಬೆಳೆಗೆ ನಷ್ಟವಾದಲ್ಲಿ ವಿಶ್ವವಿದ್ಯಾಲಯವು ಜವಾಬ್ದಾರಿಯಾಗಿರುವುದಿಲ್ಲ.
ಹರಾಜಿನಲ್ಲಿ ಭಾಗವಹಿಸುವವರು ಠೇವಣಿ ಇಡುವ ಮೊದಲು ಕಚೇರಿ ಸಮಯದಲ್ಲಿ ಅಡಿಕೆ ಫಸಲನ್ನು ಪರಿಶೀಲಿಸುವುದು ಕಡ್ಡಾಯ. ನಂತರ ಯಾವುದೇ ತಕರಾರುಗಳನ್ನು ವಿಶ್ವವಿದ್ಯಾಲಯವು ಪರಿಗಣಿಸುವುದಿಲ್ಲ.
ಯಶಸ್ವಿ ಬಿಡ್ಡುದಾರರಿಗೆ ವಿಶ್ವವಿದ್ಯಾಲಯದಿಂದ ಮುಂಗಡ ಹಣದ ಮೇಲೆ ಯಾವುದೇ ಬಡ್ಡಿ ಅಥವಾ ನಷ್ಟವನ್ನು ಭರಿಸಲಾಗುವುದಿಲ್ಲ.
ಅನ್ವಯವಾಗುವ ತೆರಿಗೆ ಸುಂಕಗಳನ್ನು ಬಿಡ್ಡುದಾರರೇ ಭರಿಸಬೇಕು.
ವಿಶ್ವವಿದ್ಯಾಲಯದ ಹಿತದೃಷ್ಟಿಯಿಂದ ಹೆಚ್ಚುವರಿ ಷರತ್ತುಗಳನ್ನು ವಿಧಿಸಿದಲ್ಲಿ ಅವುಗಳನ್ನು ಪಾಲಿಸಲು ಬಿಡ್ಡುದಾರರು ಬದ್ಧರಾಗಿರಬೇಕು.
ತೋಟದ ಹಗಲು ಮತ್ತು ರಾತ್ರಿ ಕಾವಲಿನ ಜವಾಬ್ದಾರಿ ಗುತ್ತಿಗೆದಾರನದಾಗಿರುತ್ತದೆ. ಕಾವಲಿಗೆ ಅಗತ್ಯವಿರುವ ಸಿಬ್ಬಂದಿಗೆ ವಿಶ್ವವಿದ್ಯಾಲಯದ ಅನುಮತಿ ಪಡೆದು ಗುರುತಿನ ಚೀಟಿ ನೀಡಬೇಕು. ತೋಟದಲ್ಲಿ ದನ, ಮೇಕೆ, ಕುರಿ, ಹಂದಿ ಮತ್ತಿತರ ಯಾವುದೇ ಪ್ರಾಣಿಗಳನ್ನು ಇಟ್ಟುಕೊಳ್ಳಬಾರದು ಅಥವಾ ಮೇಯಿಸಬಾರದು.
ಗುತ್ತಿಗೆದಾರರು ತೋಟವನ್ನು ಬೇರೆಯವರಿಗೆ ಮರು-ಗುತ್ತಿಗೆ ನೀಡುವಂತಿಲ್ಲ.
ಗುತ್ತಿಗೆ ಅವಧಿಯಲ್ಲಿ ಕರಾರಿಗೆ ವಿರುದ್ಧವಾಗಿ ನಡೆದುಕೊಂಡರೆ ಗುತ್ತಿಗೆಯನ್ನು ರದ್ದುಗೊಳಿಸಿ, ಪಾವತಿಸಿದ ಎಲ್ಲಾ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಈ ವಿಷಯದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ, ಮೇಲ್ವಿಚಾರಣೆ ಅಧಿಕಾರಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
ಅಡಿಕೆ ಫಸಲನ್ನು ಟೆಂಡರ್‌ನಲ್ಲಿ ತಿಳಿಸಿರುವ ನಿಯಮದಂತೆ ಮಾತ್ರ ಕೊಯ್ಲು ಮಾಡಬೇಕು. ಕೊಯ್ಲು ಮಾಡುವಾಗ ಅಂತರ ಬೆಳೆಗೆ ನಷ್ಟ ಉಂಟಾದಲ್ಲಿ ಗುತ್ತಿಗೆದಾರರು ವಿಶ್ವವಿದ್ಯಾಲಯಕ್ಕೆ ಪರಿಹಾರ ನೀಡಬೇಕು.
ಯಶಸ್ವಿ ಗುತ್ತಿಗೆದಾರರು ಈ ಗುತ್ತಿಗೆಯನ್ನು ಜನವರಿ 31, 2026 ರವರೆಗೆ ಮಾತ್ರ ಹೊಂದಿರುತ್ತಾರೆ. ಈ ದಿನಾಂಕದ ನಂತರ ಅಡಿಕೆ ಫಸಲನ್ನು ಕೊಯ್ಲು ಮಾಡುವ ಹಕ್ಕು ಇರುವುದಿಲ್ಲ.
ಕೃಷಿ ಚಟುವಟಿಕೆಗಳು: ಅಡಿಕೆ ಮರಗಳಿಗೆ ಗೊಬ್ಬರ ಹಾಕುವುದು, ಮಧ್ಯಂತರ ಬೆಸಾಯ, ನೀರಾವರಿ ಹಾಗೂ ಇತರೆ ಸಂಬಂಧಿತ ಕೆಲಸಗಳನ್ನು ಮಾಡುವ ಅಧಿಕಾರವನ್ನು ಕೇಂದ್ರದ ಅಧಿಕಾರಿಗಳು ಹೊಂದಿರುತ್ತಾರೆ.
Shivamogga Arecanut Auction ಈ ಎಲ್ಲಾ ಷರತ್ತುಗಳಿಗೆ ಒಪ್ಪುವ ಆಸಕ್ತರು ಹರಾಜಿನಲ್ಲಿ ಪಾಲ್ಗೊಳ್ಳಬಹುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹೊನ್ನಾವಿಲೆ, ಶಿವಮೊಗ್ಗ ಕಚೇರಿಯನ್ನು ಸಂಪರ್ಕಿಸಬಹುದು.