SHIVAMOGGA | MALENADUTODAY NEWS
Sep 7, 2024
Hosanagara news | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಪಟಗುಪ್ಪ ಸೇತುವೆ ಮೇಲಿಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಗೆ ಇದೀಗ ಕಾರಣ ರಿವೀಲ್ ಆಗಿದೆ.
ತಮ್ಮ ಪತ್ನಿಯ ಮೇಲೆ ಹಲ್ಲೆ ಮಾಡಿ ಪಟಗುಪ್ಪ ಸೇತುವೆ ಮೇಲಿಂದ ಸದಾನಂದ ಭಟ್ ಎಂಬವವರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಗೆ ಅನೈತಿಕ ಸಂಬಂಧ ಕಾರಣ ಎಂದು ಪೊಲೀಸ್ ತನಿಖೆಯಲ್ಲಿ ಹೇಳಲಾಗುತ್ತಿದೆ.
ಮೃತ ಸದಾನಂದ ಮತ್ತು ಸಬಿತಾ ನಡುವೆ 12 ವರ್ಷಗಳಿಂದ ಜಗಳ ನಡೆಯುತ್ತಲೇ ಇತ್ತು. ಮೇಲಾಗಿ ಇವರಿಬ್ಬರು ಒಂದೇ ಮನೆಯಲ್ಲಿದ್ದರೂ ಒಬ್ಬರು ಮಾಡಿದ ಅಡುಗೆ ಇನ್ನೊಬ್ಬರು ತಿನ್ನುತ್ತಿರಲಿಲ್ಲ. ಗಂಡನ ಜೊತೆಗೆ ಪತ್ನಿ ಜಗಳ ಮಾಡುತ್ತಿರುವುದಕ್ಕೆ ಗಂಡನ ಅನೈತಿಕ ಸಂಬಂಧ ಕಾರಣ ಎನ್ನಲಾಗಿದೆ.


ಇದೇ ವಿಚಾರಕ್ಕೆ ಕಳೆದ ಬುಧವಾರ ಜಗಳ ನಡೆದಿದೆ. ಆ ಬಳಿಕ ಸದಾನಂದ ಭಟ್ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತದನಂತರ ಗಾಬರಿಗೊಂಡು ಅಲ್ಲಿಂದ ಕಾರು ತೆಗೆದುಕೊಂಡು ನಾಪತ್ತೆಯಾಗಿದ್ದ ಸದಾನಂದ ನಿನ್ನೆ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿರುವ ಪೊಲೀಸರು ನಡೆದ ವಿಚಾರಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ