SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 8, 2024 shimoaga news
ಶಿವಮೊಗ್ಗ ನಗರದಲ್ಲಿ ಗಣೇಶನ ಹಬ್ಬದ ನಡುವೆ ಸರಣಿ ಕಳ್ಳತನ ನಡೆದಿದೆ. ಶಿವಮೊಗ್ಗ ನಗರದ ಬಸವನಗುಡಿಯ ಪಿಡಬ್ಲ್ಯೂ ಕ್ವಾರ್ಟಸ್ ನಲ್ಲಿ ಕಳ್ಳತನ ನಡೆದಿರುವ ಬಗ್ಗೆ ವರದಿಯಾಗಿದೆ
Shimoga jayanagar police station – ಶಿವಮೊಗ್ಗ ಜಯನಗರ ಪೊಲೀಸ್ ಸ್ಟೇಷನ್
ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬರುವ ಪಿಡಬ್ಲ್ಯುಡಿ ಕ್ವಾರ್ಟಸ್‌ಗಳಲ್ಲಿ ಕಳ್ಳತನ ನಡೆದಿದ್ದು ಘಟನೆಯಲ್ಲಿ ನಾಲ್ಕು ಮನೆಯ ಭೀಗ ಮುರಿದು ಕಳ್ಳತನ ಮಾಡಲಾಗಿದೆ.
ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಒಂದು ಮನೆಯಲ್ಲಿ ಒಂದುವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ನಗದು ಕಳ್ಳತನವಾಗಿದೆ. ಇನ್ನೊಂದು ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಹೇಳಲಾಗಿದೆ.
ಸ್ಥಳಕ್ಕೆ ಜಯನಗರ ಪೊಲೀಸ್ ಠಾಣೆ ಪೊಲೀಸರು, ಶ್ವಾನದಳ ಹಾಗೂ ಪಿಂಗರ್ ಪ್ರಿಂಟ್ ಎಕ್ಸ್‌ಪರ್ಟ್ಸ್ ದೌಡಾಯಿಸಿದ್ದು ಮಹಜರ್ ನಡೆಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ