SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 23, 2024 Shimoga eid milad
ಶಿವಮೊಗ್ಗದಲ್ಲಿ ನಿನ್ನೆ ಈದ್ ಮಿಲಾದ್ ಮೆರವಣಿಗೆ ಸಂಭ್ರಮ ಸಡಗರದೊಂದಿಗೆ ಯಶಸ್ವಿಯಾಗಿ ಸಮಾಪ್ತಿಗೊಂಡಿದೆ. ಅಮೀರ್ ಅಹಮದ್ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಮುಸ್ಲಿಮ್ ಸಮುದಾಯದವರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.


ಇನ್ನೂ ಗಣಪತಿ ಮೆರವಣಿಗೆಯ ರೀತಿಯಲ್ಲಿಯೇ ಈದ್ ಮಿಲಾದ್ ಮೆರವಣಿಗೆಯನ್ನ ಯಶಸ್ವಿಗೊಳಿಸುವಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಶ್ರಮ ಸಾರ್ಥಕವಾಗಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳಿಗೆ ಸಂದೇಶ ರವಾನಿಸಿರುವ ಎಸ್‌ಪಿ ಮಿಥುನ್ ಕುಮಾರ್ ಈದ್ ಮಿಲಾದ್ ಮೆರವಣಿಗೆಗಳು ಇಡಿ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಇಲಾಖೆಯ ಸಿಬ್ಬಂದಿಗಳು ಹಗಲಿರುಳು ದುಡಿದಿದ್ದಾರೆ ಎಂದಿರುವ ಎಸ್‌ಪಿ ಮಿಥನ್ ಕುಮಾರ್ ಜಿಲ್ಲೆ ಹಾಗು ಹೊರಜಿಲ್ಲೆಯ ಪೊಲೀಸ್ ಸಿಬ್ಬಂದಿಗಳ ಕೆಲಸಕ್ಕೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಮಾಧ್ಯಮಗಳಿಗೆ, ರಾಜಕೀಯ ನಾಯಕರಿಗೆ, ಧಾರ್ಮಿಕ ಮುಖಂಡರುಗಳಿಗೆ ಅವರುಗಳು ನೀಡಿರುವ ಸಹಕಾರಕ್ಕೆ ಎಸ್‌ಪಿ ಮಿಥುನ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.
ಭಾವೈಕ್ಯತೆಗೆ ಸಾಕ್ಷಿಯಾದ ಈದ್ ಮಿಲಾದ್
ಕಳೆದ ವರ್ಷದಂತೆ ಈ ವರುಷದ ಈದ್ ಮಿಲಾದ್ ಇರಲಿಲ್ಲ. ಕಳೆದ ಸಾಲಿನಲ್ಲಿ ಕಾಣಿಸಿದ್ದ ಕೆಲವು ಪ್ಲೆಕ್ಸ್‌ಗಳನ್ನ ಈ ಸಲ ಪ್ರದರ್ಶನವಾಗದಂತೆ ಮುಸ್ಲಿಮ್ ಮುಖಂಡರೇ ಎಚ್ಚರಿಕೆ ವಹಿಸಿದ್ದರು. ಅಲ್ಲದೆ ಮೆರವಣಿಗೆಯಲ್ಲಿ ವಿವಿಧತೆ ಮೆರೆದಿದ್ದು ಈ ಸಲದ ಈದ್ ಮಿಲಾದ್ ಮೆರವಣಿಗೆಯ ವಿಶೇಷವಾಗಿತ್ತು. ಶಿವಮೊಗ್ಗದ ಹಲವು ಕಡೆಗಳಲ್ಲಿ ಹಿಂದೂಗಳು ಮೆರವಣಿಗೆಯಲ್ಲಿ ಸಾಗಿ ಬರುತ್ತಿದ್ದವರಿಗೆ ಸಿಹಿ ಹಂಚಿದ್ದರು, ಜ್ಯೂಸ್ ವಿತರಿಸಿದ್ದರು.
ಸೂಳೆ ಬೈಲಿನಲ್ಲಿ ದುರ್ಗಮ್ಮ ಸೇವ ಸಮಿತಿಯ ಸದಸ್ಯರು ಹಾಗೂ ಸ್ಥಳೀಯ ಮಸೀದಿಯ ಮುಖಂಡರುಗಳು ಹಲವರು ಈದ್ ಮಿಲಾದ್ ಮೆರವಣಿಗೆಯ ಸಂತೋಷದಲ್ಲಿ ಪಾಲ್ಗೊಂಡರು. ಹಿಂದೂ ಮುಸ್ಲಿಮ್ ಧ್ವಜಗಳನ್ನ ಒಟ್ಟಿಗೆ ಹಿಡಿದು ಪ್ರದರ್ಶಿಸಿ ನಾವೆಲ್ಲರು ಒಂದೇ ಎಂಬ ಸಂದೇಶ ಸಾರಿದರು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಇತ್ತ ಜಾಮೀಯ ಮಸಿದಿಗೆ ಶಾಂತಿಯ ಕಡೆಗೆ ನಮ್ಮ ನಡಿಗೆ ಸಮಿತಿ ವತಿಯಿಂದ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮಿಯರೆಲ್ಲ ರುಹೋಗಿ ಇದ್ ಮಿಲಾದ್ ಮೆರವಣಿಗೆಗೆ ಶುಭಕೋರಿ ಸೌರ್ಹಾದ ಯುತವಾಗಿ ಮೆರವಣಿಗೆ ಸಾಗಲಿ ಎಂದು ಹಾರೈಸಿದ್ದು ವಿಶೇಷವಾಗಿತ್ತು.
ಇನ್ನೂ ಗೋಪಾಳದ ನೇತಾಜಿ ಸರ್ಕಲ್‌ನಲ್ಲಿ ಈದ್ ಮಿಲಾದ್ ವಿಶೇಷವಾಗಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಮಾಜಿ ರಾಷ್ಟ್ರಪತಿ ಜೆಪಿಜೆ ಅಬ್ದುಲ್ ಕಲಾಂರ ಭಾವಚಿತ್ರ ಇರುವ ಮಹಾದ್ವಾರ ನಿರ್ಮಿಸಲಾಗಿತ್ತು. ಅಲ್ಲದೆ ಸರ್ವಧರ್ಮದವರಿಗೂ ಸ್ವಾಗತ ಎಂದು ಬರೆದಿದ್ದು ಭಾವೇಕ್ಯತೆಗೆ ಸಾಕ್ಷಿಯಾಗಿತ್ತು.
ಇದೇ ಏರಿಯಾದಲ್ಲಿನ ಸ್ಥಳೀಯರೆಲ್ಲರೂ ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಜ್ಯೂಸ್ ಕೊಟ್ಟು ಶುಭಾಶಯಗಳನ್ನ ತಿಳಿಸಿದರು. ಪೊಲೀಸರು ಸೇರಿದಂತೆ ವಿವಿಧ ಮುಖಂಡರು ಮೆರವಣಿಗೆಯ ನೆನಪಿಗಾಗಿ ಒಟ್ಟು ನಿಂತು ಫೋಟೋಗಳನ್ನ ಕ್ಲಿಕ್ಕಿಸಿದರು.
ಹೀಗೆ ಶಿವಮೊಗ್ಗದ ಈದ್ ಮಿಲಾದ್ ಈ ಸಲ ಹೊಸರಂಗನ್ನೆ ಪಡೆದುಕೊಂಡಿತ್ತು.