ಶಿವಮೊಗ್ಗ ವಿಮಾನ ನಿಲ್ದಾಣದ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಬಂದಿದೆ. ಶಿವಮೊಗ್ಗ ಏರ್‌ಪೋರ್ಟ್‌ನಿಂದ ಇದೇ ಆಕ್ಟೋಬರ್ 10 ರಿಂದ ಸೈಸ್ ಜೆಟ್ ವಿಮಾನ ಸಂಸ್ಥೆ ತನ್ನ ವಿಮಾನಗಳ ಸಂಚಾರ ಆರಂಭಿಸಲಿದೆ. ಈಗಾಗಲೇ SpiceJet ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಶಿವಮೊಗ್ಗದಿಂದ ವಿಮಾನ ಸಂಚಾರದ ಟಿಕೆಟ್ ಮಾರಾಟವನ್ನು ಸಹ ಆರಂಭಿಸಿದೆ.
ಶಿವಮೊಗ್ಗದಿಂದ ಚೆನ್ನೈ ಪ್ಲೈಟ್ ರೆಡಿ
ಈ ಹಿಂದೆ ಇಂಡಿಗೋ ಬೆಂಗಳೂರು ಶಿವಮೊಗ್ಗ ಸಂಚಾರ ಆರಂಭ ಮಾಡಿತ್ತು. ಅದಾದ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ತನ್ನ ವಾಣಿಜ್ಯ ಚಟುವಟಿಕೆ ಆರಂಭಿಸಿದ ಸ್ಟಾರ್ ಏರ್ ಗೋವಾ, ತಿರುಪತಿ ಹಾಗೂ ಹೈದರಾಬಾದ್‌ಗೆ ವಿಮಾನ ಸಂಚಾರ ಸೇವೆ ಒದಗಿಸಿತ್ತು. ಇದೀಗ ಸ್ಪೈಸ್ ಜೆಟ್ ವಿಮಾನಗಳು ಶಿವಮೊಗ್ಗ ಟು ಚೆನ್ನೈ ಹಾಗೂ ಶಿವಮೊಗ್ಗ ಟು ಹೈದ್ರಾಬಾದ್ ನಡುವೆ ಸಂಚರಿಸಲಿದೆ.
SpiceJet to launch Shivamogga – Chennai, Hyderabad Flights 10OCT2024
ವಿಮಾನ ಸಂಚಾರದ ವೇಳಾಪಟ್ಟಿ
ಶಿವಮೊಗ್ಗ ಟು ಚೆನ್ನೈ
ಸ್ಪೈಸ್ ಜೆಟ್‌ನ SG2700 ವಿಮಾನವೂ ಚೆನ್ನೈನಿಂದ ಬೆಳಗ್ಗೆ 10.40 ಕ್ಕೆ ಹೊರಡಲಿದ್ದು, ಮಧ್ಯಾಹ್ನ 12.10 ಕ್ಕೆ ಶಿವಮೊಗ್ಗ ತಲುಪಲಿದೆ
ಅದೇ ರೀತಿಯಲ್ಲಿ ಶಿವಮೊಗ್ಗದಿಂದ SG2703 ವಿಮಾನವೂ ಸಂಜೆ 16.25 ಕ್ಕೆ ಹೊರಟು ಸಂಜೆ 17.55 ಕ್ಕೆ ಚೆನ್ನೈ ತಲುಪಲಿದೆ

MAA – RQY / 1040 – 1210 / SG2700
RQY – MAA / 1625 – 1755 / SG2703
ಶಿವಮೊಗ್ಗ ಟು ಹೈದರಾಬಾದ್
ಇನ್ನೂ ಶಿವಮೊಗ್ಗದಿಂದ ಸ್ಪೈಸ್ ಜೆಟ್‌ನ SG2701 ವಿಮಾನವೂ ಮಧ್ಯಾಹ್ನ 12.35 ಕ್ಕೆ ಹೊರಟು ಮಧ್ಯಾಹ್ನ 14.05 ಕ್ಕೆ ಹೈದರಾಬಾದ್ ತಲುಪಲಿದೆ
ಅತ್ತ ಹೈದರಾಬಾದ್ ನಿಂದ ಮಧ್ಯಾಹ್ನ SG2702 ವಿಮಾನವೂ 14.40 ಕ್ಕೆ ಹೊರಟು ಶಿವಮೊಗ್ಗಕ್ಕೆ 16.10 ಕ್ಕೆ ತಲುಪಲಿದೆ
RQY – HYD / 1235 – 1405 / SG2701
HYD – RQY / 1440 – 1610 / SG2702
ಈ ಹಿಂದೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕಳೆದ ಆಗಸ್ಟ್‌ನಲ್ಲಿಯೇ ಶಿವಮೊಗ್ಗದಿಂದ ಸ್ಪೈಸ್ ಜೆಟ್ ಕಾರ್ಯಾಚರಣೆ ನಡೆಸುವುದಾಗಿ ತಿಳಿಸಿದ್ದರು. ಆನಂತರ ಯಾವುದೇ ಬೆಳವಣಿಗೆಗಳು ನಡೆದಿರಲಿಲ್ಲ. ಇದೀಗ ಸ್ಪೈಸ್ ಜೆಟ್ ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಸಹ ಆರಂಭಿಸಿದೆ.
ಸ್ಪೈಸ್ ಜೆಟ್ ವೆಬ್‌ಸೈಟ್ ಪ್ರಕಾರ, ಶಿವಮೊಗ್ಗದಿಂದ ಹೈದರಾಬಾದ್‌ಗೆ ಅಕ್ಟೋಬರ್ ಹತ್ತನೇ ತಾರೀಖಿನ ಟಿಕೆಟ್‌ನ ದರದ ವಿವರನ್ನ ಗಮನಿಸುವುದಾದರೆ, ಸ್ಪೈಸ್ ಸೇವರ್ ಟಿಕೆಟ್ ದರ 2299 ರೂಪಾಯಿ ಇದೆ, ಸ್ಪೈಸ್ ಫ್ಲೆಕ್ಸ್‌ನ ಟಿಕೆಟ್ ದರ 3033 ರೂಪಾಯಿ ಇದೆ, ಅದೇ ರೀತಿ ಸ್ಪೈಸ್ ಮ್ಯಾಕ್ಸ್ ಟಿಕೆಟ್ ದರ 4135 ರೂಪಾಯಿ ಇದೆ.
ಶಿವಮೊಗ್ಗದಿಂದ ಚೆನ್ನೈಗೆ ಪ್ರಯಾಣದ ದರ ಹೀಗಿದೆ. ಸ್ಪೈಸ್ ಸೇವರ್ ಟಿಕೆಟ್ ದರ 4123 ರೂಪಾಯಿ ಇದೆ. ಸ್ಪೈಸ್ ಫ್ಲೆಕ್ಸ್‌ನ ಟಿಕೆಟ್ ದರ 4763 ರೂಪಾಯಿ ಇದೆ. ಸ್ಪೈಸ್ ಮ್ಯಾಕ್ಸ್ ಟಿಕೆಟ್ ದರ 5867 ರೂಪಾಯಿ ಇದೆ. ಅಂದಹಾಗೆ ಇದು ಅಕ್ಟೋಬರ್ 10 ನೇ ತಾರೀಖಿನಂದು ಪ್ರಯಾಣಿಸುವ ಪ್ರಯಾಣಿಕರಿಗೆ ಇವತ್ತು ಪ್ರದರ್ಶಿಸಿರುವ ದರದ ಪಟ್ಟಿಯಾಗಿದೆ. ವಾರದಲ್ಲಿ ಆರು ದಿನ ಸ್ಪೈಸ್ ಜೆಟ್ ವಿಮಾನ ಸಂಚಾರ ನಡೆಸಲಿದ್ದು, ಗುರುವಾರ ಸಂಚಾರ ಇರುವುದಿಲ್ಲ ಎನ್ನಲಾಗಿದೆ.