SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 11, 2024 Shimoga Fast news
ವಡನ್ ಬೈಲ್‌ನಲ್ಲಿ ಕಾಣಿಸಿದ ಕರಿಚಿರತೆ black chita found vadanbail
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ವಡನ್ ಬೈಲ್ ಬಳಿಯಲ್ಲಿ ಅಪರೂಪದ ವನ್ಯಜೀವಿಗಳ ಪಟ್ಟಿಯಲ್ಲಿರುವ ಕರಿಚಿರತೆ ಕಾಣಿಸಿದೆ. ಪ್ರಾಣಿಯೊಂದನ್ನ ಬೇಟೆಯಾಡಿ ಎಳೆದೊಯ್ಯುತ್ತಿರುವ ದೃಶ್ಯ ಅದೇ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಒಂದರಲ್ಲಿದ್ದವರು ಚಿತ್ರೀಕರಿಸಿದ್ದಾರೆ.
ನಾಡಬಂದೂಕು ಶೆಡ್ ಮೇಲೆ ಪೊಲೀಸರ ದಾಳಿ – weapon shed raid
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಜೇನಿ ಬಳಿ ಸಿಗುವ ಕಾಳಿಕಾಪುರದ ಗ್ರಾಮವೊಂದರ ಬಳಿ ಶೆಡ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿ ನಾಡ ಬಂದೂಕು ತಯಾರು ಮಾಡಲಾಗುತ್ತಿತ್ತು ಎಂಬ ವಿಷಯ ತಿಳಿದು ಪೊಲೀಸರು ಈ ರೇಡ್ ನಡೆಸಿದ್ದಾರೆ. ಹೊಸನಗರ ಪೊಲೀಸರು ಈ ದಾಳಿ ನಡೆಸಿದ್ದು, ರೇಡ್ ವೇಳೆ ನಳಿಕೆಗಳು, ಮರದ ಹಿಡಿಕೆ, ಟ್ರಿಗರ್, ಕೇಪ್, ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ವಡನ್ ಬೈಲ್‌ನಲ್ಲಿ ಕಾಣ ಸಿಕ್ಕಿರುವ ಕರಿಚಿರತೆಯ ದೃಶ್ಯ pic.twitter.com/k0YLdbM9Sd
— malenadutoday.com (@malnadtoday) September 11, 2024
ಹೊಸಮನೆ ಕಿರಿಕ್ 13 ಮಂದಿ ವಿರುದ್ಧ ಕೇಸ್ shimoga hosamane
ಗಡಿಪಾರಾಗಿರುವ ರೌಡಿ ಶೀಟರ್ ಕಡ್ಡಿ ಮಧು ಗ್ಯಾಂಗ್ ನಡೆಸಿದ ಗಲಾಟೆ ವಿಚಾರದಲ್ಲಿ 13 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಇದೇ ಘಟನೆಯಲ್ಲಿ ಹಲ್ಲೆಗೊಳಗಾದವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಗಣಪತಿ ಹಬ್ಬ ಮುಗಿಸಿಕೊಂಡು ಹೋಗುತ್ತಿದ್ದ ಇಬ್ಬರು ಯುವಕರ ಮೇಲೆ ಕಡ್ಡಿಮಧು ಸೇರಿದಂತೆ 14 ಜನರ ಗುಂಪೊಂದು ಹಿಂಬಾಲಿಸಿಕೊಂಡು ಬಂದು ದಾಳಿ ಮಾಡಿದೆ ಎಂದು ಆರೋಪಿಸಲಾಗಿದೆ. ಕಡ್ಡಿ ಮಧು ಸೇರಿದಂತೆ ಒಟ್ಟು 13 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
