sagara town police news 15-06-2025 / ಸಾಗರ ಟೌನ್​ನ ರಸ್ತೆ ಬದಿಯಲ್ಲಿ ವ್ಯಕ್ತಿಯ ಶವ ಪತ್ತೆ! ವ್ಯಕ್ತವಾಯ್ತು ಅನುಮಾನ!

Malenadu Today

sagara town police news

ಶಿವಮೊಗ್ಗ ಜಿಲ್ಲೆ ಸಾಗರ ಟೌನ್​ಲ್ಲಿ ಬಡಾವಣೆಯೊಂದರ ರಸ್ತೆಯ ಬದಿಯಲ್ಲಿ ಇವತ್ತು ಬೆಳಗ್ಗೆ ಬೆಳಗ್ಗೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಘಟನೆ ಅನುಮಾನಸ್ಪದವಾಗಿದ್ದು, ಈ ಸಂಬಂದ ಸಾಗರ ಟೌನ್​ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 

ಇವತ್ತು ಬೆಳಗ್ಗೆ ಇಲ್ಲಿನ ವಿಜಯನಗರದಲ್ಲಿನ ರಸ್ತೆಯೊಂದರ ಬಳಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಂದ ಪೊಲೀಸರು ಸ್ಥಳಮಹಜರ್ ನಡೆಸಿದ್ದಾರೆ. ಇನ್ನೂ ಘಟನೆ ಬೆಳಕಿಗೆ ಬಂದ ಬೆನ್ನಲ್ಲೆ ಮೃತರನ್ನು ಸದಾನಂದ ಎಂದು ಗುರುತು ಪತ್ತೆ ಮಾಡಲಾಗಿದೆ. ಉಳಿದಂತೆ ಘಟನೆ ಅನುಮಾನಸ್ಪದವಾಗಿದ್ದು, ಪೊಲೀಸರ ತನಿಖೆಯಿಂದ ವಿಚಾರ ಗೊತ್ತಾಗಬೇಕಿದೆ. 

Share This Article