Sagara Land Case ಜಮೀನಿಗೆ ಬೆಂಕಿ (Arson) ಹಚ್ಚಿದ ಕೇಸ್ವೊಂದರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೋರ್ಟ್ ಇಬ್ಬರಿಗೆ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಗಾಳಿಪುರ ಗ್ರಾಮದ ಕಲ್ಲಳ್ಳಿ ಹುಚ್ಚಪ್ಪ ಮತ್ತು ಮಧುಸೂದನ ಎಂಬುವವರಿಗೆ ಸಾಗರದ ಜೆಎಂಎಫ್‌ಸಿ (JMFC) ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ಮತ್ತು ತಲಾ ₹8,000 ದಂಡವನ್ನು ವಿಧಿಸಿದೆ.

Sagara Land Case
2015ರ ಮಾರ್ಚ್ 1ರಂದು ಆರೋಪಿಗಳು ದೊಂಬೆ ಗ್ರಾಮದ ಎನ್.ಕೆ. ರಾಧಾಮೋಹನ್ ಅವರಿಗೆ ಸೇರಿದ ಜಮೀನಿಗೆ ಬೆಂಕಿ ಹಚ್ಚಿದ್ದರು ಎಂದು ಕೇಸ್ ಆಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ (charge sheet) ಸಲ್ಲಿಸಿದ್ದರು.
ನ್ಯಾಯಾಧೀಶರಾದ ಮಾದೇಶ್ ಎಂ. ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ಸರ್ಕಾರದ ಪರವಾಗಿ ವಕೀಲ ಚಂದ್ರಶೇಖರ್ (advocate Chandrashekhar) ಅವರು ವಾದ ಮಂಡಿಸಿದ್ದರು. ಇದೀಗ ತೀರ್ಪು ಹೊರಬಿದ್ದಿದೆ.


Sagara Land Case, Sagar JMFC court, land arson case, Kallalli Huchchappa, Madhusudan, judicial verdict, two-year imprisonment, fine, police complaint, charge sheet, advocate Chandrashekhar.
