Sagar Sigandur Bridge ಸಾಗರ ಸಿಗಂದೂರು ಸೇತುವೆ ಯಶಸ್ವಿ ಲೋಡ್ ಟೆಸ್ಟಿಂಗ್: ದೇಶದ 2ನೇ ಅತಿ ಉದ್ದದ ಕೇಬಲ್ ಸೇತುವೆ ಸದ್ಯದಲ್ಲೇ ಲೋಕಾರ್ಪಣೆ?
Sagar Sigandur Bridge / ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಮಹತ್ವದ ಸಿಗಂದೂರು ಸೇತುವೆಯ ಕೆಲಸ ಕಂಪ್ಲೀಟ್ ಆಗಿರುವ ಬಗ್ಗೆ ನಿನ್ನೆ ಜೂನ್ 24 ರಂದು ಮಲೆನಾಡು ಟುಡೆಯಲ್ಲಿ ಆರ್ಟಿಕಲ್ ಓದಿದ್ದೀರಿ. ಇದೀಗ ಸಿಗಂದೂರು ಸೇತುವೆಯ ಬಗ್ಗೆ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ಈ ಬಗ್ಗೆ ಸ್ವತಃ ಸಂಸದ ಬಿವೈ ರಾಘವೇಂದ್ರರವರು ತಮ್ಮ ಇನ್ಸ್ಟಾ ಗ್ರಾಂ ಅಕೌಂಟ್ನಲ್ಲಿ ಪೋಸ್ಟ್ವೊಂದನ್ನ ಹಾಕಿದ್ದಾರೆ. ಅಲ್ಲದೆ ಈ ಫೋಸ್ಟ್ ಸಿಕ್ಕಾಪಟ್ಟೆ ವೈರಲ್ ಕೂಡ ಹರಿದಾಡುತ್ತಿದೆ.
ಫಸ್ಟ್ ಟೆಸ್ಟ್ನಲ್ಲಿ ಪಾಸಾದ ಸಿಗಂದೂರು ಸೇತುವೆ Sagar Sigandur Bridge

Karnataka’s longest inland cable-stayed bridge – a massive 2.25 km extradosed balanced cantilever structure with 740m of cable.
ಸದ್ಯ ಲಭ್ಯವಾದ ಮಾಹಿತಿಯ ಪ್ರಕಾರ, ಈಗಾಗಲೇ ಕಂಪ್ಲೀಟ್ ಆಗಿರುವ ಸಿಗಂದೂರು ಸೇತುವೆಯನ್ನು ಇದೀಗ ಅದು ತಡೆಯಬಹುದಾದ ಭಾರದ ವಿಚಾರದಲ್ಲಿ ಟೆಸ್ಟ್ ಮಾಡಲಾಗುತ್ತಿದೆ. ಈ ಸಂಬಂಧ ನಡೆಸಿದ ಮೊದಲ ಟೆಸ್ಟ್ನಲ್ಲಿ ಈ ಸೇತುವೆ ಪಾಸ್ ಆಗಿದೆ ಎಂದು ಇಂಜಿನಿಯರ್‌ಗಳು ಹೇಳುತ್ತಿದ್ದಾರೆ. ಮೊದಲ ಹಂತದ ಲೋಡ್ ಟೆಸ್ಟಿಂಗ್‌ನಲ್ಲಿ, ನೂರು ಟನ್ ಭಾರ ತುಂಬಿದ ಲಾರಿಗಳನ್ನು ಸೇತುವೆ ಮೇಲೆ ನಿಲ್ಲಿಸಿ, ಸಿಗಂದೂರು ಸೇತುವೆಯ ಸಾಮರ್ಥ್ಯವನ್ನು ಪರೀಕ್ಷಿಸಲಾಗಿದೆ. ಅಲ್ಲದೆ ಈ ಪರೀಕ್ಷೆಯು ಯಶಸ್ವಿಯು ಆಗಿದೆ.


Karnataka’s longest inland cable-stayed bridge – a massive 2.25 km extradosed balanced cantilever structure with 740m of cable.
ಲೋಡ್ ಟೆಸ್ಟಿಂಗ್ ಪ್ರಕ್ರಿಯೆ ಹೇಗೆ ನಡೆಯಿತು? (How Load Testing Works | Bridge Structural Integrity) Sagar Sigandur Bridge
ಹೊಳೆಬಾಗಿಲು ಮತ್ತು ಕಳಸವಳ್ಳಿ ಮಧ್ಯೆ, ಶರಾವತಿ ಹಿನ್ನೀರಿನಲ್ಲಿ 2.14 ಕಿ.ಮೀ. ಉದ್ದದ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಇದು ದೇಶದ ಎರಡನೇ ಅತಿ ಉದ್ದದ ಕೇಬಲ್ ಸೇತುವೆಯಾಗಿದೆ. ಸೇತುವೆಯ ಕೇಬಲ್ ಆಧಾರಿತ ಭಾಗವನ್ನು ‘ಎಕ್ಸ್‌ಟ್ರಾ ಡೋಸ್ ಪೋರ್ಷನ್’ ಎಂದೂ, ಉಳಿದ ಭಾಗವನ್ನು ‘ಬ್ಯಾಲೆನ್ಸ್ ಕ್ಯಾಂಟಿಲಿವರ್’ ಎಂದೂ ಕರೆಯಲಾಗುತ್ತದೆ. ಇದೀಗ ಬ್ಯಾಲೆನ್ಸ್ ಕ್ಯಾಂಟಿಲಿವರ್ ವಿಭಾಗದಲ್ಲಿ ಲೋಡ್ ಟೆಸ್ಟಿಂಗ್ ನಡೆಸಲಾಗಿದೆ.

Karnataka’s longest inland cable-stayed bridge – a massive 2.25 km extradosed balanced cantilever structure with 740m of cable.
ಸೇತುವೆಯ ಬ್ಯಾಲೆನ್ಸ್ ಕ್ಯಾಂಟಿಲಿವರ್ ವಿಭಾಗದಲ್ಲಿ ಪ್ರತಿ ‘ಸೆಗ್ಮೆಂಟ್’ ಮೇಲೆ 100 ಟನ್ ಭಾರವನ್ನು ಹೊರಿಸಿ, ಸೇತುವೆ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಗಿತ್ತು. ಪ್ರಾಥಮಿಕ ಹಂತದಲ್ಲಿ 25 ಟನ್ ಆನಂತರ ಪ್ರತಿ ಗಂಟೆಗೆ 25 ಟನ್ ಭಾರವನ್ನು ಕ್ರಮವಾಗಿ ಹೆಚ್ಚಿಸುತ್ತಾ ಅಂತಿಮವಾಗಿ ನಾಲ್ಕು ಗಂಟೆಗಳಲ್ಲಿ ಒಟ್ಟು 100 ಟನ್ ಭಾರವನ್ನು ಸೇತುವೆ ಮೇಲೆ ಟ್ರಕ್ಗಳ ಸಹಾಯದಿಂದ ಹೊರಿಸಲಾಗಿತ್ತು. ಈ ವೇಳೇ ಪ್ರತಿ ಸಲ ಭಾರ ಹೆಚ್ಚಾದಗಲು ಸೇತುವೆ ತೋರುವ ಚಲನೆ ಅಥವಾ ಪ್ರತಿಚಲನೆ ಅಥವಾ ವಿಚಲನೆಯನ್ನು ದಾಖಲಿಸಿದ ಇಂಜಿಯರ್ಗಳು ಈಗಾಗಲೇ ಸಿದ್ಧ ಮಾದರಿಯ ಭಾರ ಹೊರುವ ಸಾಮರ್ಥ್ಯಕ್ಕೆ ಅದನ್ನು ಹೋಲಿಸಿ ನೋಡಿದರು. ಈ ವೇಳೆ ಸಿಗಂದೂರು ಸೇತುವೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದು ಕಂಡು ಬಂತು.

Karnataka’s longest inland cable-stayed bridge – a massive 2.25 km extradosed balanced cantilever structure with 740m of cable.
ಅತ್ಯುತ್ತಮ ಗುಣಮಟ್ಟದ ಸೂಚನೆ (High Quality Bridge | Structural Performance): “ಲೋಡ್ ಟೆಸ್ಟಿಂಗ್ ಸಂದರ್ಭದಲ್ಲಿ ಸೇತುವೆಯಲ್ಲಿ 38 ಎಂ.ಎಂ. ವರೆಗೆ ವಿಚಲನಕ್ಕೆ ಅವಕಾಶವಿದೆ ಎನ್ನಲಾಗುತ್ತೆ. ಸಿಗಂದೂರು ಸೇತುವೆಯಲ್ಲಿ ಕೇವಲ 22 ಎಂ.ಎಂ. ವಿಚಲನ ಕಂಡುಬಂದಿದೆ. ಈಗ ಹಂತ ಹಂತವಾಗಿ ಲೋಡ್ ತೆಗೆದಾಗ ವಿಚಲನವು 0 ಎಂ.ಎಂ.ಗೆ ತಲುಪಿದ್ದು, ಪರೀಕ್ಷೆ ಯಶಸ್ವಿಯಾಗಿದೆ. ನಮ್ಮ ಸೇತುವೆ ಅತ್ಯಂತ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ್ದಾಗಿದೆ ಎಂಬುದನ್ನು ಈ ಪರೀಕ್ಷೆ ದೃಢಪಡಿಸಿದೆ ಎಂದು ಮುಖ್ಯ ಇಂಜಿನಿಯರ್ ಪೀರ್ ಪಾಷಾ ಸಂತಸ ವ್ಯಕ್ತಪಡಿಸಿದ್ದಾರೆ.

Karnataka’s longest inland cable-stayed bridge – a massive 2.25 km extradosed balanced cantilever structure with 740m of cable.
ಎರಡನೇ ಹಂತದ ಪರೀಕ್ಷೆಗೆ ಸಿದ್ಧತೆ (Next Phase Testing | Cable-Stayed Bridge): ಮೊದಲ ಹಂತದ ಪರೀಕ್ಷೆಯ ಬೆನ್ನಲ್ಲೆ, ಮುಂದಿನ ವಾರ ಎರಡನೇ ಹಂತದ ಲೋಡ್ ಟೆಸ್ಟಿಂಗ್ ನಡೆಯುವ ಸಾಧ್ಯತೆ ಇದೆ. ಈ ಸಲ ಕೇಬಲ್ಗಳನ್ನು ಅಳವಡಿಸಿರುವ ಇರುವ ಎಕ್ಸ್‌ಟ್ರಾ ಡೋಸ್ ವಿಭಾಗದಲ್ಲಿ ನಡೆಯಲಿದೆ. ಅಲ್ಲಿಯು ಮೇಲೆ ತಿಳಿಸಿದ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಹಿರಿಯ ಇಂಜಿನಿಯರ್‌ಗಳು ಮತ್ತು ಗುತ್ತಿಗೆ ಸಂಸ್ಥೆಯವರು ಉಪಸ್ಥಿತರಿರಲಿದ್ದಾರೆ.

Karnataka’s longest inland cable-stayed bridge – a massive 2.25 km extradosed balanced cantilever structure with 740m of cable.
ನೂರು ವರ್ಷಗಳ ಬಾಳಿಕೆ (100 Year Lifespan | Bridge Maintenance): Sagar Sigandur Bridge ಸೇತುವೆ ನಿರ್ಮಾಣದ ಗುತ್ತಿಗೆ ಪಡೆದ ಸಂಸ್ಥೆಯು ಹತ್ತು ವರ್ಷಗಳ ಕಾಲ ಇದರ ನಿರ್ವಹಣೆಯನ್ನು ನೋಡಿಕೊಳ್ಳಲಿದೆ. ನಂತರ ಪ್ರತಿ ಆರು ತಿಂಗಳಿಗೆ ಒಮ್ಮೆ ನಿಯಮಿತ ನಿರ್ವಹಣೆ ಕಾರ್ಯ ನಡೆಸಿದರೆ, 100 ವರ್ಷವಾದರೂ ಸೇತುವೆಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಮುಖ್ಯ ಇಂಜಿನಿಯರ್ ಪೀರ್ ಪಾಷಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Karnataka’s longest inland cable-stayed bridge – a massive 2.25 km extradosed balanced cantilever structure with 740m of cable.
ಇನ್ನೂ ಈ ಬಗ್ಗೆ ಸಂಸದ ಬಿ.ವೈ ರಾಘವೇಂದ್ರವರು ಇನ್ಸ್ಟಾ ಗ್ರಾಮ್ ಅಕೌಂಟ್ನಲ್ಲಿ ಸಿಗಂದೂರು ಸೇತುವೆಯಲ್ಲಿ ಲೋಡ್ ಪರೀಕ್ಷೆ ಯಶಸ್ವಿ ಯಾಗಿದೆ. ಕರ್ನಾಟಕದ ಅತಿ ಉದ್ದದ ಒಳನಾಡು ಕೇಬಲ್ ಆಧಾರಿತ ಸೇತುವೆ – ಬೃಹತ್ 2.25 ಕಿ.ಮೀ. ಉದ್ದದ, 740 ಮೀ. ಕೇಬಲ್ ಹೊಂದಿರುವ ಎಕ್ಸ್‌ಟ್ರಾಡೋಸ್ಡ್ ಬ್ಯಾಲೆನ್ಸ್‌ಡ್ ಕ್ಯಾಂಟಿಲಿವರ್ ಸೇತುವೆ ಇದಾಗಿದೆ. ಈ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲು ಕಾರಣರಾದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಧನ್ಯವಾದಗಳು ಎಂದಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : malendutoday.com /
Sagar Sigandur Bridge june load test 25 , Sagar Sigandur Bridge ,Load Testing Passed , Karnataka Cable Bridge, Sharavathi Backwaters, Infrastructure Development