ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ಹೊಟ್ಟೆಯಲ್ಲಿ ಬೆಳೆಯುವ ಗಡ್ಡೆಗಳ ಬಗ್ಗೆ ಆಗಾಗ ಅಚ್ಚರಿ ಎನಿಸುವಂತಹ ಸುದ್ದಿಗಳನ್ನು ಓದಿರುತ್ತೀರಿ. ಇದೀಗ ಅಂತಹುದ್ದೆ ಒಂದು ಸುದ್ದಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕುನಲ್ಲಿ ಕೇಳಿಬಂದಿದೆ. ವಿಶೇಷ ಅಂದರೆ, ವೈದ್ಯ ಲೋಕದ ಸದಸ್ಯರು ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಆರುವರೆ ಕೆಜಿ ತೂಕದ ಗಡ್ಡೆಯನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಗರದ ಆಸ್ಪತ್ರೆಯ ವೈದ್ಯರ ತಂಡವೊಂದು ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಬರೋಬ್ಬರಿ 6.5 ಕೆ.ಜಿ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದೆ. ಹೊಟ್ಟೆನೋವಿನಿಂದ ಬಳಲುತ್ತಿದ್ದ ಇಲ್ಲಿನ 47 ವರ್ಷದ ಮಹಿಳೆಯೊಬ್ಬರು ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ ಪ್ರಸೂತಿ ತಜ್ಞೆ ಡಾ. ವಿದ್ಯಾಶ್ರೀ ಅವರು, ಸಂತ್ರಸ್ತ ಮಹಿಳೆಯ ಗರ್ಭಕೋಶದ ಸುತ್ತ ಅತಿ ದೊಡ್ಡ ಗಡ್ಡೆ ಬೆಳೆದಿರುವುದನ್ನು ಪತ್ತೆ ಹಚ್ಚಿದರು. ಈ ನಿಟ್ಟಿನಲ್ಲಿ ಆಪರೇಷನ್ ಕೈಗೊಂಡ ಡಾ. ವಿದ್ಯಾಶ್ರೀ ನೇತೃತ್ವದ ವೈದ್ಯರ ತಂಡ, ಯಶಸ್ವಿಯಾಗಿ ಗಡ್ಡೆಯನ್ನು ರಿಮೂವ್ ಮಾಡಿದೆ.
ಶಸ್ತ್ರಚಿಕಿತ್ಸೆಯ ನಂತರ ಮಾತನಾಡಿರುವ ಡಾ. ವಿದ್ಯಾಶ್ರೀ, ಮಹಿಳೆಯು ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ದೃಢಪಡಿಸಿದರು. ಈ ಯಶಸ್ವಿ ಶಸ್ತ್ರಚಿಕಿತ್ಸೆಯಲ್ಲಿ ಡಾ. ಬಿ.ಜಿ. ಸಂಗಮ್, ಹಾಗೂ ಸಿಬ್ಬಂದಿಗಳಾದ ರೀಟಾ, ನಾಗರತ್ನ, ಚಂದ್ರು ಮತ್ತು ರಾಕೇಶ್ ಭಾಗಿಯಾಗಿದ್ದರು.

Sagar Doctors Successfully Remove 6.5 kg Uterine Tumor
Uterine tumor removal, 6.5 kg tumor, Sagar Government Hospital, Dr. Vidyashree, large tumor surgery Karnataka, Sagar Thayi Magu Hospital, Sagar Government Hospital doctors, ಸಾಗರ ಆಸ್ಪತ್ರೆ, ಗರ್ಭಕೋಶದ ಗಡ್ಡೆ, ಶಸ್ತ್ರಚಿಕಿತ್ಸೆ, ಸರ್ಕಾರಿ ಆಸ್ಪತ್ರೆ, ಡಾ. ವಿದ್ಯಾಶ್ರೀ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
Sagar Doctors Successfully Remove 6.5 kg Uterine Tumor