ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 9 2025 : ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಇಬ್ಬರು ಅಪ್ರಾಪ್ತ ಬಾಲಕ-ಬಾಲಕಿ ರಕ್ಷಣೆ ಮಾಡಲಾಗಿದೆ. ರೈಲ್ವೆ ರಕ್ಷಣಾ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಬಾಲಕ ಹಾಗೂ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಪ್ರಾಪ್ತ ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ‘ನನ್ನೆ ಫರಿಸ್ತೆ’ ಹೆಸರಿನ ಕಾರ್ಯಾಚರಣೆ ನಡೆಸುತ್ತದೆ. ಈ ಕಾರ್ಯಾಚರಣೆಯಡಿಯಲ್ಲಿ ಅನುಮಾನ ಬಂದ ಅಪ್ರಾಪ್ತರನ್ನು ತಡೆದು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ವಿಚಾರಿಸುತ್ತಾರೆ. ಇಂತಹ ಬಹುತೇಕ ಸಂದರ್ಭದಲ್ಲಿ ಮಕ್ಕಳು ಅಪಾಯದಲ್ಲಿರುವುದು ಪತ್ತೆಯಾಗಿದ್ದು, ಅಂತಹ ಮಕ್ಕಳನ್ನ ಅಧಿಕಾರಿಗಳು ರಕ್ಷಣೆ ಮಾಡುತ್ತಾರೆ.
ಶಿವಮೊಗ್ಗ ಟೌನ್ ರೈಲ್ವೇ ನಿಲ್ದಾಣದಲ್ಲಿಯು ಇದೇ ಮಾದರಿಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರನ್ನು ರಕ್ಷಣೆ ಮಾಡಲಾಗಿದೆ. ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಅಪ್ರಾಪ್ತರನ್ನು ತಮ್ಮ ಕಚೇರಿಗೆ ಕರೆತಂದು ವಿಚಾರಿಸಲಾಗಿದೆ. 16 ಮತ್ತು 17 ವರ್ಷ ವಯಸ್ಸಿನ ಬಾಲಕ ಮತ್ತು ಬಾಲಕಿಯನ್ನು ವಿಚಾರಣೆ ಬಳಿಕ ಅವರನ್ನು ಶಿವಮೊಗ್ಗದ ಚೈಲ್ಡ್‌ಲೈನ್‌ಗೆ ಹಸ್ತಾಂತರಿಸಲಾಗಿದೆ.
RPF Rescues Minors at Shivamogga Railway Station
RPF Rescues Minors at Shivamogga Railway Station