power cut in shivamogga | ಶಿವಮೊಗ್ಗ ಸಿಟಿಯಲ್ಲಿ ಹಲವೆಡೆ ನಾಳೆ ಪವರ್‌ ಕಟ್

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 5, 2025 ‌‌ ‌

ಶಿವಮೊಗ್ಗ ಮೆಸ್ಕಾಂ ವಿಭಾಗ ನಾಳೆ ದಿನ ಶಿವಮೊಗ್ಗ ನಗರದ ವಿವಿದೆಡೆ ತುರ್ತು ಕಾಮಗಾರಿಯನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಅಂದರೆ ಮಾರ್ಚ್‌ ಆರರಂದು ದಿನವಿಡಿ ಕರೆಂಟ್‌ ಇರಲ್ಲ ಎಂದು ತಿಳಿಸಿದೆ. ಮೆಸ್ಕಾಂ ಶಿವಮೊಗ್ಗ ವಿಭಾಗದ ಪ್ರಕಟಣೆಯ ವಿವರ ಹೀಗಿದೆ. 

ಮಾ.6: ವಿದ್ಯುತ್‌ ವ್ಯತ್ಯಯ

ಶಿವಮೊಗ್ಗ ನಗರ ಉಪವಿಭಾಗ-2ರ ಮಂಡ್ಲಿ ವ್ಯಾಪ್ತಿ ಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರು ವುದರಿಂದ ಮಾ.06 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಪೇಪರ್ ಪ್ಯಾಕೇಜ್, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಯ ಗಂಧರ್ವನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಮಂಜುನಾಥ ರೈಸ್ ಮಿಲ್, ಬೆನಕೇಶ್ವರ ರೈಸ್ ಮಿಲ್, ಅನ್ನಪೂರ್ಣೆಶ್ವರಿ ಬಡಾವಣೆ ಗಜಾನನ ಗ್ಯಾರೇಜ್, ಪೀಲೆ ಫ್ಯಾಕ್ಟರಿ, ಸವಾಯಿಪಾಳ್ಯ, ಕುರುಬರ ಪಾಳ್ಯ, ಇಲಿಯಾಜ್ ನಗರ 1 ರಿಂದ 4ನೇ ಅಡ್ಡರಸ್ತೆ, 100 ಅಡಿ ರಸ್ತೆ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜ ನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Share This Article