Multi level Parking : ಶಿವಮೊಗ್ಗದ ಬಹುಮಹಡಿ ವಾಹನ ನಿಲ್ದಾಣ ಓಪನ್ಗೆ ಮುಹೂರ್ತ ಫಿಕ್ಸ್ : ಯಾವಾಗ ಓಪನ್
Multi level Parking : ಶಿವಮೊಗ್ಗ: ನಗರದ ಶಿವಪ್ಪನಾಯಕ ಪ್ರತಿಮೆ ವೃತ್ತದ ಬಳಿ, ಹಳೇ ಎಸ್.ಎನ್. ಮಾರ್ಕೆಟ್ ಸಮೀಪ ನಿರ್ಮಿಸಲಾಗಿರುವ ಬಹುಮಹಡಿ ವಾಹನ ನಿಲ್ದಾಣದ ಶುಭಾರಂಭಕ್ಕೆ ಕಡೆಗೂ ದಿನಾಂಕ ನಿಗದಿಯಾಗಿದೆ. ಇದೇ ಆಗಸ್ಟ್ 1 ರಂದು ಬೆಳಿಗ್ಗೆ 11 ಗಂಟೆಗೆ ಈ ಬಹುನಿರೀಕ್ಷಿತ ಪಾರ್ಕಿಂಗ್ ಕಟ್ಟಡ ಉದ್ಘಾಟನೆಗೊಳ್ಳಲಿದೆ.
ಬಹುಮಹಡಿ ಕಟ್ಟಡ ನಿರ್ಮಾಣಗೊಂಡು ವರ್ಷಗಳೇ ಕಳೆದಿದ್ದರೂ, ಅದರ ಉದ್ಘಾಟನೆ ಯಾವಾಗ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿತ್ತು. ನಗರದಲ್ಲಿ ವಾಹನ ದಟ್ಟಣೆ ಮತ್ತು ಪಾರ್ಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಟ್ಟಡದ ಕಾರ್ಯಾಚರಣೆಗೆ ಸಾರ್ವಜನಿಕರು ಕಾತುರದಿಂದ ಕಾಯುತ್ತಿದ್ದರು.
ಕಳೆದ ಆರು ತಿಂಗಳ ಹಿಂದಷ್ಟೇ ಈ ಬಹುಮಹಡಿ ಕಟ್ಟಡವು ಸ್ಮಾರ್ಟ್ ಸಿಟಿಯಿಂದ ನಗರ ಪಾಲಿಕೆಗೆ ಹಸ್ತಾಂತರಗೊಂಡಿತ್ತು. ಅದರ ನಂತರ, ಪಾರ್ಕಿಂಗ್ ನಿರ್ವಹಣೆಯ ಟೆಂಡರ್ ಪ್ರಕ್ರಿಯೆ ನಡೆಯಿತು. ಇದೀಗ, ಶಿವಮೊಗ್ಗದವರಿಗೆ ಈ ಪಾರ್ಕಿಂಗ್ ಟೆಂಡರ್ ಆಗಿದ್ದು, ಆಗಸ್ಟ್ 1 ರಿಂದ ಅಧಿಕೃತವಾಗಿ ಪಾರ್ಕಿಂಗ್ ವ್ಯವಸ್ಥೆ ಶುಭಾರಂಭಗೊಳ್ಳಲಿದೆ.