Missing Mother-in-Law ಅಳಿಯನೊಂದಿಗೆ ಕಾಣೆಯಾಗಿದ್ದ ಅತ್ತೆ ಪತ್ತೆ : ಗಂಡ ಇನ್ನೂ ನಾಪತ್ತೆ
ದಾವಣಗೆರೆ, ಜೂನ್ 28, 2025 : ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಿನ್ನೆದಿನ ತನಗೆ ಅತ್ತೆಯಾಗಬೇಕಾದ, ಹೆಂಡತಿಯ ಮಲತಾಯಿ ಜೊತೆಗೆ ವ್ಯಕ್ತಿಯೊಬ್ಬ ನಾಪತ್ತೆಯಾದ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೆ ಸಂತ್ರಸ್ತೆಗೆ ಇಬ್ಬರು ಸೇರಿ ಕಿರುಕುಳ ನೀಡಿದ್ದ ಆರೋಪ ಸಂಬಂಧ ಸಾಕಷ್ಟು ಚರ್ಚೆಯಾಗಿತ್ತು.ಇದೀಗ ಪ್ರಕರಣ ಮತ್ತೊಂದು ಮಜಲಿಗೆ ತಲುಪಿದೆ.
ಒಂದೂವರೆ ತಿಂಗಳ ಹಿಂದೆ ಅಳಿಯನೊಂದಿಗೆ ನಾಪತ್ತೆಯಾಗಿದ್ದ ಅತ್ತೆ ಪತ್ತೆಯಾಗಿದ್ದಾರೆ. ಅನೈತಿಕ ಸಂಬಂಧದ ಆರೋಪದ ನಡುವೆ ಅತ್ತೆ ಏಕಾಂಗಿಯಾಗಿ ಮನೆಗೆ ಮರಳಿದ್ದಾಳೆ. ಅಲ್ಲದೆ ಈ ಬೆನ್ನಲ್ಲೇ ಕೌಟುಂಬಿಕ ಕಲಹ ಭುಗಿಲೆದ್ದಿದೆ. 48 ವರ್ಷದ ಅತ್ತೆ ಮತ್ತು 24 ವರ್ಷದ ಅಳಿಯ ಮೇ 2 ರಂದು ನಾಪತ್ತೆಯಾಗಿದ್ದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು. ಇದೀಗ ಅತ್ತೆ ಮನೆಗೆ ಮರಳಿದ್ದಾರೆ.ಅಳಿಯನಿಗಾಗಿ ಹುಡುಕಾಟ ನಡೆಯುತ್ತಿದೆ.
Missing Mother-in-Law
ಪ್ರಕರಣದ ಹಿನ್ನೆಲೆ: ನಾಪತ್ತೆಯಾಗಿದ್ದ ಅಳಿಯನಿಗೆ ಏಪ್ರಿಲ್‌ನಲ್ಲಿ ವಿವಾಹವಾಗಿತ್ತು. 48 ವರ್ಷದ ಮಹಿಳೆ (ಅತ್ತೆ) ತನ್ನ ಮಲಮಗಳನ್ನು ಮದುವೆ ಮಾಡಿಸಿದ್ದರು. ಆದರೆ, ಇದೇ ಮಹಿಳೆಯು ಅಳಿಯನ ಜೊತೆ ಸಂಬಂಧ ಇಟ್ಟುಕೊಂಡು ನಾಪತ್ತೆಯಾಗಿದ್ದಳು ಎಂಬುದು ಆರೋಪ. ಅಲ್ಲದೆ ಇದೆ ಕಾರಣಕ್ಕೆ ತನ್ನ ಮಲ ಮಗಳನ್ನು ಮನೆಯಿಂದ ಆಚೆ ಹಾಕಿ, ಆಸ್ತಿಯನ್ನು ಸಹ ನೀಡದೇ ಹೊರದಬ್ಬಿದ್ದಾಳೆ ಎಂದು ದೂರು ದಾಖಲಾಗಿದೆ. ಇತ್ತ ಗಂಡನೂ ಇಲ್ಲದೆ ತನ್ನ ತವರಿನಲ್ಲಿಯು ಸ್ಥಾನವಿಲ್ಲದೆ, ಬೀದಿಗೆ ಬಿದ್ದ ಹೆಣ್ಣು ಮಗಳು ತನಗೆ ನ್ಯಾಯ ಬೆಕು ಎಂದು ಮಾದ್ಯಮಗಳ ಮುಂದೆ ಬಂದಿದ್ದಳು. ಮಾಧ್ಯಮಗಳ ವರದಿ ಬೆನ್ನಲ್ಲೆ ಈ ಸಂಬಂಧ ಕಾನೂನು ಸಂಸ್ಥೆಗಳು ಕ್ರಮಕ್ಕೆ ಮುಂದಾಗಿವೆ.

Missing Mother-in-Law Found in Davangere; Affair Suspected with Son-in-Law
A 48-year-old mother-in-law, missing for over a month with her 24-year-old son-in-law from Channagiri, Davangere, has returned home, fueling suspicions of an illicit affair. Her return has sparked family disputes, while the son-in-law remains untraced.
Davangere News, Channagiri Police, Missing Persons Karnataka, Family Dispute, Illicit Affair, Mother-in-Law Son-in-Law, Extramarital Affair, Social Media Viral, Karnataka Crime News, Local News Davangere