Mask man interview ಧರ್ಮಸ್ಥಳ ಪ್ರಕರಣದಲ್ಲಿ ಕೇಂದ್ರ ಬಿಂದುವಾಗಿರುವ ಮಾಸ್ಕ್ ಮ್ಯಾನ್’ ಎಂದೇ ಹೆಸರಾದ ಚಿನ್ನಯ್ಯ ಎಂಬ ವ್ಯಕ್ತಿ ತಮ್ಮ ಮೊದಲ ಸಂದರ್ಶನದಲ್ಲಿ ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಬುರುಡೆ ಕೇಸ್ ವಿಚಾರವಾಗಿ ಎಸ್ಐಟಿ ವಿಚಾರಣೆಗೆ ಒಳಪಡುವ ಮೊದಲು ಡಿ ಟಾಲ್ಕ್ ಎಂಬ ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನ ಇದಾಗಿದ್ದು, ಸೌಜನ್ಯಾ ಪ್ರಕರಣ, ಅಪರಿಚಿತ ಹೆಣಗಳ ಹೂಳುವಿಕೆ ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ‘
ಚಾನಲ್ ಮುಖ್ಯಸ್ಥರ ಹೇಳಿರುವಂತೆ ಈ ಸಂದರ್ಶನವನ್ನು ವಿಟ್ನೆಸ್ ಪ್ರೊಟೆಕ್ಷನ್ ಆ್ಯಕ್ಟ್ನಡಿ ಅವರ ಗೌಪ್ಯತೆ ಕಾಪಾಡುವ ಕಾರಣದಿಂದ ಇದುವರೆಗೆ ಬಿಡುಗಡೆ ಮಾಡಿರಲಿಲ್ಲ.ಈ ಇಂಟರ್ವ್ಯೂವ್ನಲ್ಲಿ ಚಿನ್ನಯ್ಯ ಹೇಳಿರುವ ವಿಚಾರ ಎಲ್ಲಾ ಸತ್ಯ ಎಂದು ಹೇಳಲು ಆಗುವುದಿಲ್ಲ. ಎಸ್ಐಟಿ ತನಿಖೆ ನಂತರವೇ ಅದರ ಸತ್ಯ ತಿಳಿದು ಬರಲಿದೆ ಎಂದಿದ್ದಾರೆ
ಸಂದರ್ಶನದಲ್ಲಿರುವಂತೆ ಮೂಲತಃ ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದವರಾದ ಚಿನ್ನಯ್ಯ, ತಮ್ಮ ತಂದೆ-ತಾಯಿ ಚಿಕ್ಕ ವಯಸ್ಸಿನಲ್ಲಿ ತೀರಿಕೊಂಡ ನಂತರ ಧರ್ಮಸ್ಥಳದಲ್ಲಿ ಕಸ ಗುಡಿಸುವುದು, ಟಾಯ್ಲೆಟ್ ತೊಳೆಯುವುದು ಹಾಗೂ ಅಸಹಜ ಸಾವಿಗೀಡಾದ ಹೆಣಗಳನ್ನು ಹೂಳುವ ಕೆಲಸ ಮಾಡುತ್ತಿದ್ದಾಗಿ ತಿಳಿಸಿದ್ದಾರೆ. ಮಾಹಿತಿ ಕಚೇರಿಯಿಂದ ಬರುವ ಆದೇಶದ ಮೇರೆಗೆ ಪೊಲೀಸರ ಸಮ್ಮುಖದಲ್ಲಿ ಈ ಕಾರ್ಯ ಮಾಡುತ್ತಿದ್ದೆ ಎಂದಿದ್ದಾರೆ.
ಇದುವರೆಗೆ ಸುಮಾರು 1,500ಕ್ಕೂ ಹೆಚ್ಚು ಅಪರಿಚಿತ ಶವಗಳನ್ನು ತಾವೊಬ್ಬರೇ ಹೂತಿರುವುದಾಗಿ ಹೇಳಿದ್ದಾರೆ. ಅಪರಿಚಿತ ಹೆಣಗಳಿಗೆ ಮರಣೋತ್ತರ ಪರೀಕ್ಷೆ ನಡೆಸುತ್ತಿರಲಿಲ್ಲ. ಬಟ್ಟೆ ಇಲ್ಲದ, ಕೊಳೆತ ಸ್ಥಿತಿಯಲ್ಲಿ ಶವಗಳು ಸಿಗುತ್ತಿದ್ದವು. ಹೆಚ್ಚಿನ ಹೆಣಗಳು ಕೊಲೆ ಮಾಡಿರುವಂತೆ ಕಾಣುತ್ತಿದ್ದವು. ಹೆಚ್ಚಾಗಿ 10 ರಿಂದ 15 ವರ್ಷ ವಯಸ್ಸಿನ ಹೆಣ್ಣುಮಕ್ಕಳ ಶವಗಳು ಇರುತ್ತಿದ್ದವು ಎಂದು ಅವರು ಹೇಳಿದ್ದಾರೆ. ತಾನು ಹೂತ ಶವಗಳ ಸ್ಥಳಗಳು ತನಗೆ ಮಾತ್ರ ಗೊತ್ತಿದ್ದು, ಈ ಸ್ಥಳಗಳನ್ನು ಬಹಿರಂಗಪಡಿಸಲು ತನಗೆ ರಕ್ಷಣೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Mask man interview
ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ ಚಿನ್ನಯ್ಯ, ಸೌಜನ್ಯಾಳನ್ನು ಕೊಲೆ ಮಾಡಿ ಬಿಸಾಡಲಾಗಿದೆ. ಈ ಕೊಲೆಯನ್ನು ದೊಡ್ಡವರು ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಾವುತಾ ನಾರಾಯಣ ಹಾಗೂ ಯಮುನಾ ಎಂಬುವವರನ್ನು ಜಾಗದ ವಿಚಾರವಾಗಿ ರೇಪ್ ಮಾಡಿ ಕೊಲೆ ಮಾಡಲಾಗಿದೆ ಎಂದಿದ್ದಾರೆ. ಸೌಜನ್ಯಾ ಪ್ರಕರಣ ನಡೆದಾಗ ತಾನು ಅಲ್ಲಿಯೇ ಇದ್ದ ಹಾಗೂ ರವಿ ಪೂಜಾರಿ ಎಂಬಾತ ರೇಪ್ ಮಾಡಿರುವುದನ್ನು ನೋಡಿದ ಕಾರಣಕ್ಕಾಗಿ ಆತನನ್ನೂ ಕೊಲೆ ಮಾಡಲಾಯಿತು ಎಂದು ಹೇಳಿದ್ದಾರೆ. ಸೌಜನ್ಯಾ ಕೊಲೆಯಾದ ಜಾಗದಲ್ಲಿ ಅನೇಕ ಹೆಣಗಳನ್ನು ತಾನು ಹೂತಿರುವುದಾಗಿ ತಿಳಿಸಿದ್ದಾರೆ. ಈ ವಿಚಾರಗಳಿಗೆ ಕೋರ್ಟ್ನಲ್ಲಿ ಸಾಕ್ಷಿ ಹೇಳಲು ಸಿದ್ಧ ಎಂದು ಚಿನ್ನಯ್ಯ ಹೇಳಿದ್ದಾರೆ.
Mask man interview
ಈ ಸಂದರ್ಶನದಲ್ಲಿ ಹೇಳಿರುವ ಎಲ್ಲಾ ವಿಚಾರಗಳು ತಮ್ಮ ಸ್ವ ಇಚ್ಛೆಯಿಂದ ಹೇಳುತ್ತಿದ್ದು, ಯಾರೂ ತನಗೆ ಹಣ ನೀಡಿಲ್ಲ ಎಂದು ಚಿನ್ನಯ್ಯ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಎದುರಿಸಲು ಸಿದ್ಧ ಎಂದಿದ್ದಾರೆ. ಇದಲ್ಲದೆ, ಹುಂಡಿಗೆ ಹಣ ಕಡಿಮೆ ಆಗುತ್ತದೆ ಎಂಬ ಕಾರಣಕ್ಕೆ ಭಿಕ್ಷುಕರನ್ನೂ ಸಾಯಿಸಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಇವೆಲ್ಲಾ ಆರೋಪಗಳಿಗೆ ಎಸ್ಐಟಿ ತನಿಖೆಯ ನಂತರ ಉತ್ತರ ದೊರೆಯುವ ನಿರೀಕ್ಷೆ ಇದೆ ಎಂದು ಚಾನಲ್ ಮುಖ್ಯಸ್ಥರು ತಿಳಿಸಿದ್ದಾರೆ.
