malnad rain and dam levels ಶಿವಮೊಗ್ಗ, malenadu today news : August 18 2025: ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಮಳೆಯ ಆರ್ಭಟಕ್ಕೆ ಹಲವೆಡೆ ಧರೆ ಕುಸಿಯುತ್ತಿರುವ ಬಗ್ಗೆಯು ವರದಿಯಾಗಿದೆ. ಇನ್ನು ನಿನ್ನೆಯು ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ಭರಪೂರ ನೀರು ಹರಿದು ಬರುತ್ತಿದೆ. ಎಷ್ಟರ ಮಟ್ಟಿಗೆ ಅಂದರೆ, ಭದ್ರಾ ಡ್ಯಾಂನೀಂದ ಹೊರಹರಿವು ಹೆಚ್ಚಳವಾಗಿದ್ದು ಭದ್ರಾವತಿಯ ಭದ್ರಾ ಸೇತುವೆಯು ಮುಳುಗಡೆಯಾಗಿದೆ.

malnad rain and dam levels ಇನ್ನೂ ಭದ್ರಾ ಡ್ಯಾಮ್ನ ಇವತ್ತಿನ ಜಲಾಶಯದ ನೀರಿನಮಟ್ಟದ ವಿವರವನ್ನು ಗಮನಿಸುವುದಾದರೆ, ಭದ್ರಾ ಡ್ಯಾಂನ ಜಲಾಶಯದ ನೀರಿನ ಮಟ್ಟ ಇವತ್ತು ಬೆಳಗ್ಗೆ 6 ಗಂಟೆಯ ಹೊತ್ತಿಗೆ 184 ಅಡಿ ಮತ್ತು 9 ಇಂಚುಗಳಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ, 69.968 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 34,430 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಲ್ಲದೆ 39,245 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಕ್ರಸ್ಟ್ ಗೇಟ್ಗಳ ಮೂಲಕವೇ 33,029 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಕೇವಲ 7040 ಕ್ಯೂಸೆಕ್ಸ್ ನೀರು ಒಳಹರಿವಿತ್ತು ಮತ್ತು ಇಷ್ಟೆ ಪ್ರಮಾಣದ ನೀರನ್ನು ಡ್ಯಾಂನಿಂದ ಹೊರಕ್ಕೆ ಬಿಡಲಾಗುತ್ತಿತ್ತು.

ತುಂಗಾ ಜಲಾಶಯದ ನೀರಿನ ಮಟ್ಟ
malnad rain and dam levels ಇನ್ನೂ ತುಂಗಾ ಡ್ಯಾಂನ ನೀರಿನಮಟ್ಟ ಗಮನಿಸುವುದಾದರೆ, ಜಲಾಶಯ ಈಗಾಗಲೇ ಭೃ್ತಿಯಾಗಿದೆ. ಗರಿಷ್ಟ ಮಿತಿ ತಲುಪಿರುವ ಹಿನ್ನೆಲೆಯಲ್ಲಿ ನಿರಂತರವಾಗಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇವತ್ತು ಇದರ ಪ್ರಮಾಣ ಇನ್ನಷ್ಟು ಹೆಚ್ಚಿದೆ. ಜಲಾಶಯಕ್ಕೆ ಒಟ್ಟು 73,415 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಒಟ್ಟು 76,656 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಇವತ್ತು ಸಹ ಮಳೆ ಮುಂದುವರಿದರೆ, ತುಂಗಾ ನದಿಯು ಅಪಾಯದ ಮಟ್ಟ ಮೀರಿ ಹರಿವ ಸಾಧ್ಯತೆ ಇದೆ. ವಿಶೇಷ ಅಂದರೆ, ಕಳೆದ ವರ್ಷ ಇದೇ ದಿನ ತುಂಗಾ ಜಲಾಶಯದ ಒಳಹರಿವು 10,088 ಕ್ಯೂಸೆಕ್ಸ್ ಮತ್ತು ಹೊರಹರಿವು 8,630 ಕ್ಯೂಸೆಕ್ಸ್ ನಷ್ಟಿತ್ತು.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ
ಇನ್ನೂ ವಿದ್ಯುತ್ ಶಕ್ತಿಯನ್ನು ಪೂರೈಸುವ ಸಾಗರ ತಾಲ್ಲೂಕು ಲಿಂಗನಮಕ್ಕಿಯಲ್ಲಿರುವ ಲಿಂಗನಮಕ್ಕಿ ಜಲಾಶಯಕ್ಕೆ ಕಳೆದ 24 ಗಂಟೆಗಳಲ್ಲಿ 1.55 ಅಡಿಗಳಷ್ಟು ನೀರು ಹರಿದು ಬಂದಿದೆ.
- ಲಿಂಗನಮಕ್ಕಿ ಜಲಾಶಯದ ಪ್ರಸ್ತುತ ನೀರಿನ ಮಟ್ಟ 1815.05 ನಷ್ಟಿದೆ.
- ಜಲಾಶಯಕ್ಕೆ ಒಟ್ಟು 59,891 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
- ಡ್ಯಾಮ್ನಿಂಧ 3651.81 ಕ್ಯೂಸೆಕ್ಸ್ ನೀರನ್ನು ಹೊರಕ್ಕೆ ಬಿಡಲಾಗುತ್ತದೆ
- ಲಿಂಗನಮಕ್ಕಿ ಜಲಾಶಯದ ಕ್ರಸ್ಟ್ಗೇಟ್ಗಳನ್ನು ಇನ್ನೂ ತೆರೆಯಲಾಗಿಲ್ಲ
- ಕೇವಲ ಪೆನ್‌ಸ್ಟಾಕ್‌ಗಳ ಮೂಲಕ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
- ಲಭ್ಯ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಮ್ನಲ್ಲಿ 138.55TMC ನೀರಿದೆ
- ಕಳೆದ 24 ಗಂಟೆಗಳಲ್ಲಿ ಒಟ್ಟಾರೆ 108.4 ಮಿ.ಮೀ. ಮಳೆ ದಾಖಲಾಗಿದೆ.
- ಕಳೆದ ವರ್ಷ ಇದೇ ದಿನ ಡ್ಯಾಂನ ನೀರಿನ ಮಟ್ಟ 1816.85 ಅಡಿಗಳಷ್ಟಿತ್ತು
malnad rain and dam levels

