Ks eshwarappa ಹಿಂದೂಸ್ತಾನದ ಅನ್ನ ತಿಂದು ಪಾಕಿಸ್ತಾನಕ್ಕೆ ಜೈಕಾರ ಹಾಕುವವರು ದೇಶ ಬಿಟ್ಟು ತೊಲಗಲಿ : ಕೆ ಎಸ್ ಈಶ್ವರಪ್ಪ
ks eshwarappa ಹಿಂದೂಸ್ತಾನದ ಅನ್ನ ತಿಂದು ಪಾಕಿಸ್ತಾನಕ್ಕೆ ಜೈಕಾರ ಹಾಕುವವರು ದೇಶ ಬಿಟ್ಟು ತೊಲಗಬೇಕು. ರಾಜ್ಯ ಸರ್ಕಾರದ ಓಲೈಕೆ ರಾಜಕಾರಣವೇ ಇಂತಹ ರಾಷ್ಟ್ರದ್ರೋಹಿ ಘಟನೆಗಳಿಗೆ ಕಾರಣ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೂಗಳು ಗಣೇಶೋತ್ಸವ ಮೆರವಣಿಗೆ ಮಾಡಿದರೆ ಮಸೀದಿಯಿಂದ ಕಲ್ಲು ಹೊಡೆಯುತ್ತಾರೆ. ರಾಷ್ಟ್ರಭಕ್ತರು ಮತ್ತು ಪೊಲೀಸರ ಮೇಲೂ ಕಲ್ಲು ತೂರುತ್ತಾರೆ. ಹುಬ್ಬಳ್ಳಿಯಲ್ಲಿ ಯುವಕರ ಮೇಲೆ ಚಾಕು ಇರಿಯುವ ಘಟನೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಭದ್ರಾವತಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅತ್ಯಂತ ಖಂಡನೀಯ” ಎಂದರು.ಹಿಂದೂಸ್ತಾನದ ಅನ್ನ ತಿಂದು ಪಾಕಿಸ್ತಾನಕ್ಕೆ ಜೈಕಾರ ಹಾಕುವವರು ದೇಶ ಬಿಟ್ಟು ತೊಲಗಬೇಕು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ‘ಪಾಕಿಸ್ತಾನ ಜಿಂದಾಬಾದ್’ ಕೂಗಿದ್ದು ಸುಳ್ಳು ಎಂದು ಹೇಳುತ್ತಾರೆ. ನಂತರ, ‘ತನಿಖೆ ಆಗಲಿ’ ಎಂದು ಹೇಳಿಕೆ ನೀಡುತ್ತಾರೆ. ಇಂತಹ ಓಲೈಕೆ ರಾಜಕಾರಣವೇ ಇಂತಹ ರಾಷ್ಟ್ರದ್ರೋಹಿ ಘಟನೆಗಳಿಗೆ ಕಾರಣ” ಎಂದು ಈಶ್ವರಪ್ಪ ಕಿಡಿಕಾರಿದರು.