KPS ಶಾಲಾಭಿವೃದ್ಧಿಗೆ 2 ಸಾವಿರ ಕೋಟಿ  ಸಾಲ |

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 31, 2025

ಶಿವಮೊಗ್ಗ | ಕೆಪಿಎಸ್‌ ಶಾಲೆ ಅಭಿವೃದ್ದಿಗಾಗಿ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್‌  2 ಸಾವಿರ ಕೋಟಿ ರೂಪಾಯಿಗಳಷ್ಟು ನೀಡಲು‌ ಒಪ್ಪಿದೆ, ಅದಕ್ಕೆ ನಾವು 500 ಕೋಟಿ ರೂಪಾಯಿ ಹಾಕಿ ಒಟ್ಟು  2500 ಕೋಟಿ ವೆಚ್ಚದಲ್ಲಿ ಕೆಪಿಎಸ್‌ ಶಾಲೆಯನ್ನು ಅಭಿವೃದ್ದಿ ಪಡಿಸುತ್ತೇವೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕಾಂಗ್ರೆಸ್‌ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಯಾವ ಬ್ಯಾಂಕ್‌ನವರು ಸಹ ಇಷ್ಟು ಮೊತ್ತದ ಹಣವನ್ನು ಶಾಲಾ ಅಭಿವೃದ್ದಿಗಾಗಿ ನೀಡುವುದಿಲ್ಲ. ಆದರೆ ನಮ್ಮ ಅವದಿಯ 7-8 ತಿಂಗಳಲ್ಲಿ ಶಿಕ್ಷಣದಲ್ಲಾದ ಬದಲಾವಣೆಯನ್ನು ಗಮನಿಸಿ ಕೆಪಿಡಿಯವರು ಇಷ್ಟು ಮೊತ್ತದ ಹಣವನ್ನು ನೀಡಲು ಆಸಕ್ತಿ ತೋರಿದ್ದಾರೆ. ಈ ಹಣದಲ್ಲಿ ಒಟ್ಟು 400 ರಿಂದ 500 ಶಾಲೆಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದರು.

ಈ ಹಣವನ್ನು ನಾವು ಬ್ಯಾಂಕ್‌ಗೆ ಹಂತ ಹಂತವಾಗಿ ವಾಪಸ್ ನೀಡುತ್ತೇವೆ. ನಾವು ಸಾಲ ತೆಗೆದುಕೊಳ್ಳಲು ಕೇಂದ್ರ ಸರ್ಕಾರವೇ ಕಾರಣವಾಗಿದೆ. ನಮ್ಮ ಸರ್ಕಾರಕ್ಕೆ ಕಡಿಮೆ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಆರೋಪಿಸಿದರು.

ನೀಟ್ ಕೋಚಿಂಗ್‌ನ್ನು 25 ಸಾವಿರ ಮಕ್ಕಳಿಗೆ ಸೀಮಿತಗೊಳಿಸಿದ್ವಿ‌ ಈಗ ಅದನ್ನು ಎಲ್ಲಾ ಮಕ್ಕಳಿಗೆ ವಿಸ್ತರಣೆ ಮಾಡಲಾಗುತ್ತಿದೆ. ಶಿಕ್ಷಣದಲ್ಲಿ ಹೊಸದಾಗಿ ಎಐ ತಾಂತ್ರಿಕತೆಯನ್ನು ಅಳವಡಿಸಲಾಗುತ್ತದೆ. ಮಕ್ಕಳು ಓದುವುದರಲ್ಲಿ ಮಾತ್ರ ಚೆನ್ನಾಗಿದ್ದರೆ ಸಾಲದು ಅವರ ಬಾಡಿ ಲಾಂಗ್ವೇಜ್‌ ಸಹ ಸರಿಯಾಗಿರಬೇಕು. ಇನ್ಮುಂದೆ ಅವರು ಕಂಪ್ಯೂಟರ್‌ನೊಂದಿಗೆ ಮಾತನಾಡುತ್ತಾರೆ. ಅದರಿಂದಾಗಿ ಅವರ ಬಾಡಿ ಲಾಂಗ್ವೇಜ್‌ ಸರಿ ಆಗುತ್ತೆ ಎಂದರು. ಹಾಗೆಯೇ ಗಣಿತ ಗಣಕ ಅಂದ್ರೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಪೋಷಕರ ಪೋನ್‌ನಲ್ಲಿ ಮಾತನಾಡಿ ಕಲಿಸುತ್ತಿದ್ದಾರೆ.  ಎಲ್ ಕೆ ಜಿ ಯುಕೆಜಿ ಗೆ ಚಿಲಿಪಿಲಿ ಯೋಜನೆಯಡಿ ಪಾಠ ಮಾಡಿಕೊಡಲಾಗುತ್ತಿದೆ. ಹೀಗೆ ಶಿಕ್ಷಣದಲ್ಲಿ  ಅನೇಕ ಬದಲಾವಣೆಗಳನ್ನು ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದರು.

SUMMARY | The Asian Development Bank (ADB) has agreed to provide Rs 2,000 crore for the development of kps school, for which we will spend Rs 500 crore and develop kps school at a total cost of Rs 2,500 crore

KEYWORDS | Asian Development Bank,  kps school,  development,

Share This Article