Karnataka Mahila Congress ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ಗೆ ನೂತನ ಪದಾಧಿಕಾರಿಗಳ ನೇಮಕ
ಬೆಂಗಳೂರು: ಮಹತ್ವದ ಬೆಳವಣಿಯಲ್ಲಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ (Karnataka Pradesh Mahila Congress) ಅಧ್ಯಕ್ಷೆ ಸೌಮ್ಯ ರೆಡ್ಡಿ ಅವರ ಶಿಫಾರಸಿನ ಮೇರೆಗೆ, ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಅವರು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ಗೆ (KPCC) ಹೊಸ ಪದಾಧಿಕಾರಿಗಳನ್ನು ಮತ್ತು ಜಿಲ್ಲಾಧ್ಯಕ್ಷರನ್ನು ನೇಮಿಸಿದ್ದಾರೆ. ಈ ಕುರಿತು ಇಂದು ಜುಲೈ 24, 2025 ರಂದು ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.
ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಲ್ಲಿ ಉಪಾಧ್ಯಕ್ಷರು (Vice-President), ರಾಜ್ಯ ಪ್ರಧಾನ ಕಾರ್ಯದರ್ಶಿಗಳು (State General Secretary) ಮತ್ತು ರಾಜ್ಯ ಕಾರ್ಯದರ್ಶಿಗಳು (State Secretary) ಸೇರಿದ್ದಾರೆ.


Karnataka Mahila Congress
ರಾಜಶ್ರೀ ಶ್ರೀಕಾಂತ್ ಅವರು ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರೆ, ನಾಗವೇಣಿ ಎಸ್. ಪಾಟೀಲ್, ರಾಧಾ ಎಂ, ಲಕ್ಷ್ಮೀ ಪ್ರಭುರಾಜ್, ನಮಿತಾ ಡಿ ರಾವ್ ಸೇರಿದಂತೆ ಹಲವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಂಜುಳಾ ಕಮತಗಿ, ಬಿ ಎ ಮಂಜುಳಾ, ಎಸ್ ಮಂಜುಳಾ, ಪಲ್ಲವಿ ಚಿದಂಬರಂ ಮುಂತಾದವರು ರಾಜ್ಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದಾರೆ.
ಜೊತೆಗೆ, ಏಳು ಜಿಲ್ಲೆಗಳ ಮಹಿಳಾ ಘಟಕದ ಜಿಲ್ಲಾಧ್ಯಕ್ಷರನ್ನು (District Presidents) ನೇಮಿಸಲಾಗಿದೆ. ಶ್ವೇತಾ ಬಿಆರ್ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ, ಶುಭದಾಯಿನಿ ಹೆಚ್ ಬಿ ಮಂಡ್ಯ ಜಿಲ್ಲಾಧ್ಯಕ್ಷರಾಗಿ, ಎಸ್ ನಾಗರತ್ನ ಚಾಮರಾಜನಗರ ಜಿಲ್ಲಾಧ್ಯಕ್ಷರಾಗಿ, ಊಷಾ ಅಂಚನ್ ಮಂಗಳೂರು ಜಿಲ್ಲಾಧ್ಯಕ್ಷರಾಗಿ, ಪೂಜಾ ಜಾರ್ಜ್ ಸ್ಯಾಮ್ಯುಯೆಲ್ ಬೆಂಗಳೂರು ಜಿಲ್ಲಾಧ್ಯಕ್ಷರಾಗಿ, ಅಪ್ಪಿ ಎಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮತ್ತು ಪಿ ಎಸ್ ಗೀತಾ ನಂದಿನಿ/ಗೌಡ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ವಿಶೇಷ ಅಂದರೆ, ಶಿವಮೊಗ್ಗದ ಮಹಿಳಾ ಘಟಕದ ಅದ್ಯಕ್ಷ ಸ್ಥಾನಕ್ಕೆ ಸಾಕಷ್ಟು ಪೈಪೋಟಿಗಳಿದ್ದವು..ಹಲವು ಮಹಿಳಾ ಮುಖಂಡರು ಈ ಸ್ಥಾನಕ್ಕಾಗಿ ತಮ್ಮ ನಾಯಕರ ಮೂಲಕ ಪ್ರಯತ್ನ ನಡೆಸಿದ್ದರು..ಅದರಲ್ಲಿಯೂ ಕನಿಷ್ಟ ಮೂರು ಹೆಸರುಗಳು ಅದ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಕಾಂಗ್ರೆಸ್ ವಲಯದಲ್ಲಿ ದೊಡ್ಡ ಸದ್ದು ಮಾಡಿತ್ತು..ಆದರೆ ಪ್ರಸ್ತುತ ಕೇಳಿ ಬಂದಿದ್ದ ಹೆಸರುಗಳು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ..ಶ್ವೇತಾ ಬಿಆರ್ ಅವರ ಆಯ್ಕೆ ಕುತೂಹಲ ಮೂಡಿಸಿದೆ.ಇವರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ..
Karnataka Mahila Congress Appoints New Office Bearers and District Presidents
ಅಖಿಲ ಭಾರತ ಮಹಿಳಾ ಕಾಂಗ್ರೆಸ್, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್, ನೂತನ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಸೌಮ್ಯ ರೆಡ್ಡಿ, ಅಲ್ಕಾ ಲಂಬಾ, ರಾಜಶ್ರೀ ಶ್ರೀಕಾಂತ್, ಬೆಂಗಳೂರು, ಮಹಿಳಾ ಕಾಂಗ್ರೆಸ್, ಪಕ್ಷದ ಸಂಘಟನೆ, All India Mahila Congress, Karnataka Pradesh Mahila Congress, New Office Bearers, District Presidents, Soumya Reddy, Alka Lamba, Rajashree Srikant, Bengaluru, Mahila Congress, Party Organization, #MahilaCongress #KarnatakaPolitics #Congress #NewAppointments #WomenInPolitics #KPCC #AIMC