SHIVAMOGGA | MALENADUTODAY NEWS | ಮಲೆನಾಡು ಟುಡೆ Oct 21, 2024
ಪೆಟ್ರೋಲ್ ಬಂಕ್‌ನಲ್ಲಿ ಬಾಟಲಿಗೆ ಪೆಟ್ರೋಲ್ ಹಾಕಿಸಿಕೊಂಡ ಸಂದರ್ಭದಲ್ಲಿ ಸ್ಕೂಟರ್‌ಗೂ ಸೇರಿ ಬೆಂಕಿಹೊತ್ತಿ ಕೊಂಡ ಘಟನೆಯೊಂದು ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಉಡುಪಿ ಜಿಲ್ಲೆ ಚಿಟ್ಪಾಡಿಯಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯಗಳು ವೈರಲ್ ಆಗುತ್ತಿದೆ. ಇನ್ನೂ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ಈ ನಡುವೆ ಅಲರ್ಟ್ ಆದ ಸಿಬ್ಬಂದಿ ಬೆಂಕಿ ನಂದಿಸುವ ಸಾಮಗ್ರಿಯಿಂದ ಬೆಂಕಿ ನದಿಸಿದ್ದಾರೆ.
ದ್ವಿಚಕ್ರವಾಹನ ಡಿಕ್ಕಿ ಯುವತಿ ಸಾವು
ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಗುದ್ದಿದ ಪರಿಣಾಮ ಯುವತಿಯೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡದಲ್ಲಿ ಸಂಭವಿಸಿದೆ. ಮಂಗಳೂರು ನಂತೂರು ವೃತ್ತದ ಬಳಿ ಘಟನೆ ಸಂಭವಿಸಿದ್ದು, ಕೋಡಿಕಲ್ ಮೂಲದ ಕ್ರಿಸ್ಟಿ ಕ್ರಾಸ್ತಾ (27) ಮೃತ ದುರ್ದೈವಿ. ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದಾಗ ವೇಗವಾಗಿ ಬಂದ ಮೀನಿನ ಲಾರಿ ಇವರಿಗೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ ಯುವತಿ ಸಾವನ್ನಪ್ಪಿದ್ಧಾರೆ.
ನಟ ದರ್ಶನ್‌ಗೆ ತೀವ್ರ ಬೆನ್ನುನೋವು
ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ರಿಗೆ ಬೆನ್ನುನೋವು ಇನ್ನಿಲ್ಲದಂತೆ ಕಾಡುತ್ತಿದೆ. ವಿಪರೀತ ನೋವಿನ ಹಿನ್ನೆಲೆಯಲ್ಲಿ ಅವರು ಬಳ್ಳಾರಿಯಲ್ಲಿಯೇ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಸದ್ಯ ಅವರಿಗೆ ಸರ್ಜಿಕಲ್ ಚೇರ್ , ಹಾಸಿಗೆ, ದಿಂಬು ಹಾಗೂ ಚೇರನ್ನು ತಂದುಕೊಡಲಾಗಿತ್ತು. ಆದಾಗ್ಯು ಅವರಿಗೆ ಬೆನ್ನುನೋವು ತೀವ್ರಗೊಂಡಿದೆ. ಹೀಗಾಗಿ ಅವರಿಗೆ ಸ್ಕ್ಯಾನಿಂಗ್ ನಡೆಸಿ ಚಿಕಿತ್ಸೆ ಕೊಡಿಸಲು ಜೈಲು ಆಡಳಿತ ಮುಂದಾಗಿದೆ. ದರ್ಶನ್‌ರಿಗೆ L1 ಹಾಗೂ L5 ಭಾಗದಲ್ಲಿ ನೋವು ಕಾಣಿಸಿಕೊಂಡಿದೆ.
SUMMARY | Mangaluru News, Two-wheeler Collision, Udupi News, Petrol Bunk, Fire Accident, Ballari News, Darshan has back pain,
KEYWORDS | Mangaluru News, Two-wheeler Collision, Udupi News, Petrol Bunk, Fire Accident, Ballari News, Darshan has back pain,