SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 11, 2024 hassan news
ತನ್ನ ಪತ್ನಿಯನ್ನ ಪತಿರಾಯನೊಬ್ಬ ಸ್ನೇಹಿತನ ಮೂಲಕವೇ ಕೊಲೆ ಮಾಡಿಸಿದ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಯಕಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಶೀಲಾ(42) ಹತ್ಯೆಗೈದ ಆರೋಪದಲ್ಲಿ ಪತಿ ಜಗದೀಶ್‌ರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೌಟುಂಬಿಕ ಕಲಹ- hassan news
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ ಗಂಡ ಹೆಂಡತಿ ದೂರವಿದ್ದರು. ಕಳೆದ ಶನಿವಾರ ತನ್ನ ಸ್ನೇಹಿತನನ್ನ ಮನೆಯ ಬಳಿಗೆ ಕಳುಹಿಸಿದ್ದ. ಸ್ನೇಹಿತ ಈತನ ಪತ್ನಿಯನ್ನ ಹೊರಕ್ಕೆ ಕರೆದು ಜಗಳವಾಡಿದ್ದಾನೆ. ಬಳಿಕ ಶಿಲ್ಪಾರನ್ನ ಟವಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದ. ಇದಾದ ನಂತರ ಆಕೆಯ ಶವವಕ್ಕೆ ಕಲ್ಲೊಂದನ್ನ ಕಟ್ಟಿ ಕೆರೆಯಲ್ಲಿ ಎಸೆದಿದ್ದ.
ಕೊಲೆಗೆ ಸಿಸಿ ಕ್ಯಾಮರಾದ ದೃಶ್ಯ ಸಾಕ್ಷಿ
ಈ ಘಟನೆ ಬೆನ್ನಲ್ಲೆ ಶಿಲ್ಪಾರ ಮಗಳು ತಮ್ಮ ತಾಯಿ ಕಾಣುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಸಿಸಿ ಕ್ಯಾಮರಾವೊಂದರಲ್ಲಿ ಕೊಲೆಯ ದೃಶ್ಯಾವಳಿಗಳು ಕಾಣ ಸಿಕ್ಕಿವೆ. ಅದನ್ನ ಆಧರಿಸಿದ ಪೊಲೀಸರು ಪತಿಯನ್ನ ಬಂಧಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಶಿಕ್ಷಕಿ ಮನೆಯಲ್ಲಿ ವೇಶ್ಯಾವಾಟಿಕೆ
ಉಡುಪಿ ಜಿಲ್ಲೆ ಕಾರ್ಕಳ ಪೊಲೀಸರು ಮನೆಯೊಂದರ ಮೇಲೆ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ವಿಷಯ ತಿಳಿದು ರೇಡ್ ಮಾಡಿದ್ದಾರೆ. ಈ ವೇಳೆ ಓರ್ವ ಯುವತಿಯನ್ನ ರಕ್ಷಿಸಿರುವ ಪೊಲೀಸರು ಓರ್ವ ಶಿಕ್ಷಕಿ ಸೇರಿದಂತೆ ಇಬ್ಬರನ್ನ ಬಂಧಿಸಿದ್ದಾರೆ. ಶಿಕ್ಷಕಿಯೊಬ್ಬರು ತಮ್ಮ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸ್ತಿರುವುದು ಈ ವೇಳೆ ಗೊತ್ತಾಗಿದೆ.
ಪ್ರಜ್ವಲ್ ರೇವಣ್ಣಗೆ ಸಂಕಷ್ಟ –hassan parjwal revanna
ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಒಟ್ಟು 1632 ಪುಟಗಳ ಚಾರ್ಜ್ಶೀಟ್ನಲ್ಲಿ 113 ಸಾಕ್ಷಿಗಳನ್ನು ಎಸ್‌ಐಟಿ ಉಲ್ಲೇಖಿಸಿದೆ. ಈ ಚಾರ್ಜ್‌ಶೀಟ್ ನಲ್ಲಿ 60 ರ ಸಂತ್ರಸ್ತೆಯೊಬ್ಬರಿಗೆ ಪ್ರಜ್ವಲ್ ದೌರ್ಜನ್ಯವೆಸಗಿರುವ ಬಗ್ಗೆ ಆರೋಪಿಸಲಾಗಿದೆ. ಅಲ್ಲದೆ ಸೀರೆ ಮೇಲಿದ್ದ ಕೂದಲು ಹಾಗೂ ಇತರೇ ವಸ್ತುಗಳ ಡಿಎನ್‌ಎ ಪರೀಕ್ಷೆಯನ್ನ ಮಾಡಿಸಲಾಗಿದ್ದು, ಅದರ ವರದಿ ಪ್ರಜ್ವಲ್‌ರಿಗೆ ಮುಳುವಾಗುವ ಸಾಧ್ಯತೆ ಇದೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ