Judge ಹೊಸನಗರ/ ಶಿವಮೊಗ್ಗ malenadutoday news : ಇಲ್ಲಿನ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಎಂದಿನಂತೆ ಡ್ಯೂಟಿಗೆ ಸಿದ್ಧರಾಗುತ್ತಿದ್ದರು. ಈ ನಡುವೆ ಇದ್ದಕ್ಕಿದ್ದಂತೆ ಅವರ ಸ್ಟೇಷನ್ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು. ಅವರನ್ನು ನೋಡುತ್ತಲೇ ಸ್ಟೇಷನ್ ಸೆಂಟ್ರಿ, ತಮ್ಮ ಬಂದೂಕಿನ ಜೊತೆಗೆ ಶಿಸ್ತಿನ ಸೆಲ್ಯೂಟ್ ನೀಡಿದರು. ಠಾಣೆಗೆ ಬಂದ ಅತಿಥಿ, ಗೌರವ ವಂದನೆ ಸ್ವೀಕರಿಸಿ ನೇರವಾಗಿ ಸ್ಟೇಷನ್ ಹೌಸ್ ಅಧಿಕಾರಿಯ ಚೆಂಬರ್ಗೆ ತೆರಳಿ, ಅಲ್ಲಿನ ಸ್ಥಿತಿಗತಿಗಳನ್ನು ಪ್ರಶ್ನಿಸಿ ಮಾಹಿತಿ ಪಡೆದರು.
ಅಂದಹಾಗೆ, ಹೀಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ಬಂದ ವಿಶೇಷ ಅತಿಥಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂತೋಷ್ ಎಂ. ಎಸ್.

ಸದ್ಯ ತಮ್ಮ ವ್ಯಾಪ್ತಿಯಲ್ಲಿ ಸಕ್ರೀಯವಾಗಿ ಸಮಸ್ಯೆಗಳನ್ನು ಪರಿಶೀಲಿಸುತ್ತಿರುವ ಜಡ್ಜ್ ಸಂತೋಷ್ ಎಂಎಸ್ ನಿನ್ನೆ ದಿನ ಆಗಸ್ಟ್ 5, 2025 ರಂದು ಬೆಳಗ್ಗೆ 9:00 ಗಂಟೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿದ್ದರು.
ಇವರ ಭೇಟಿ ಕುತೂಹಲ ಹಾಗೂ ಅಚ್ಚರಿ ಎರಡನ್ನು ಮೂಡಿಸಿತ್ತು. ಪಿಎಸ್ಐ ರಾಜುರೆಡ್ಡಿ ಬಿ ನ್ಯಾಯಾದೀಶರ ಪರಿಶೀಲನೆ ವೇಳೆ ಅಗತ್ಯ ಮಾಹಿತಿಯನ್ನು ಒದಗಿಸಿದರು. ನ್ಯಾಯಾಧೀಶರು ಠಾಣೆಯ ಕಾರ್ಯನಿರ್ವಹಣೆ ಮತ್ತು ಪರಿಸರವನ್ನು ಪರಿಶೀಲಿಸಿದರು. ಈ ಭೇಟಿಯ ವೇಳೆ ಅವರು ದಾಖಲೆಗಳು ಹಾಗೂ ಠಾಣೆಯ ಆವರಣವನ್ನು ತಪಾಸಣೆ ಮಾಡಿದರು.