SHIVAMOGGA | MALENADUTODAY NEWS | Aug 16, 2024 ಮಲೆನಾಡು ಟುಡೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ (Department of Women and Child Development )ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 734 ಹುದ್ದೆಗಳಿದ್ದು ಈ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. 2024ರ ಸೆಪ್ಟೆಂಬರ್ 4 ರಂದು ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ

https://karnemakaone.kar.nic.in/abcd/ApplicationForm_JA_org.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಆಯಾ ಜಿಲ್ಲೆಗಳಲ್ಲಿಗೆ ಸಂಬಂಧಿಸಿದಂತೆ ಕಾಲಂಗಳನ್ನ ಭರ್ತಿ ಮಾಡಿದರೆ ಜಿಲ್ಲೆಗಳಲ್ಲಿನ ಉದ್ಯೋಗವಕಾಶದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಅದರಲ್ಲಿ ಅರ್ಜಿ ಸಲ್ಲಿಸುವ ಹುದ್ದೆಗಳ ಕಾಲಂ ಕ್ಲಿಕ್ ಮಾಡಿದರೆ, ಅರ್ಜಿಗಳು ಓಪನ್ ಆಗುತ್ತದೆ. ಆ ಅರ್ಜಿಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಲಿಂಕ್ ಕ್ಲಿಕ್ ಮಾಡಿ https://karnemakaone.kar.nic.in/abcd/ApplicationForm_JA_org.aspx