Investment scam ಜಾಹೀರಾತು ನೋಡಿ 25 ಲಕ್ಷದ ಆಸೆಗೆ ಭದ್ರಾವತಿ ವ್ಯಕ್ತಿ ಕಳೆದುಕೊಂಡ ಹಣವೆಷ್ಟು ಗೊತ್ತಾ
ಇತ್ತೀಚೆಗೆ ಸಾಮಾಜಿಕ ಜಾತತಾಣಗಳಲ್ಲಿ ಹಣ ಹೂಡಿಕೆ ಮಾಡುವ ಜಾಹೀರಾತುಗಳನ್ನು ನಂಬಿ ಎಷ್ಟೋ ಜನರು ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಇಲ್ಲಿಯೂ ಸಹ ಭದ್ರಾವತಿಯ ಹೊಸಮನೆ ನಿವಾಸಿಯೊಬ್ಬರು ಫೇಸ್ಬುಕ್ ನಲ್ಲಿ ಬಂದಿದ್ದ ಮೇಸೇಜ್ನ್ನು ನಂಬಿ 6,83,137 ರೂಪಾಯಿ ಹಣವನ್ನು ಕಳೆದುಕೊಂಡಿದ್ದು, ಇದೀಗ ಠಾಣೆಯ ಮೆಟ್ಟಿಲೇರಿದ್ದಾರೆ
Investment scam ಹೇಗಾಯ್ತು ಘಟನೆ
ಭದ್ರಾವತಿಯ ಹೊಸಮನೆ ನಿವಾಸಿಯೊಬ್ಬರು ಫೆಸ್ ಬುಕ್ ನೋಡುತ್ತಿದ್ದಾಗ ಅದರಲ್ಲಿ ಹಣಗಳಿಸುವ ಜಾಹೀರಾತು ಬಂದಿದೆ. ಆ ಜಾಹೀರಾತಿನಲ್ಲಿ ಹಣ ಹೂಡಿಕೆ ಮಾಡಿ ಷೇರುಗಳನ್ನು ಖರೀದಿ ಮಾಡಿದರೆ ಹೆಚ್ಚಿನ ಲಾಬ ಬರುತ್ತದೆ ಎಂದು ಹಾಕಲಾಗಿತ್ತು. ವಂಚಕರ ವಂಚನೆಯ ಬಗ್ಗೆ ಅರಿಯದೇ ಇದನ್ನು ನಂಬಿದ ವ್ಯಕ್ತಿ ಹೆಚ್ಚಿನ ಲಾಭಗಳಿಸುವ ಉದ್ದೇಶದಿಂದ ಆ ಅ್ಯಪ್ನ್ನು ಇನ್ಸ್ಟಾಲ್ ಮಾಡಿಕೊಂಡು ಹಂತ ಹಂತವಾಗಿ 6,83,137 ಹಣವನ್ನು ಹೂಡಿಕೆ ಮಾಡಿದ್ದಾರೆ.
ಕೆಲದಿನಗಳ ನಂತರ ವಂಚಕರು ನಿಮಗೆ ಇದರಲ್ಲಿ ಒಟ್ಟು 25,00,602 ರೂಪಾಯಿ ಲಾಭಾಂಶ ಬಂದಿದೆ ವಿತ್ ಡ್ರಾ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಆದರೆ ಆ್ಯಪ್ನಲ್ಲಿ ವಿತ್ ಡ್ರಾ ಮಾಡಿಕೊಳ್ಳುವಾಗ ಆ ಆ್ಯಪ್ ಲಾಕ್ ಆಗಿದೆ. ಇದರಿಂದ ವಂಚಕರ ಮೋಸದ ಬಗ್ಗೆ ಅರಿತ ವ್ಯಕ್ತಿ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ