SHIVAMOGGA | MALENADUTODAY NEWS
Sep 6, 2024
Shimoga city Mla | ನಿನ್ನೆ ದಿನ ಶಿವಮೊಗ್ಗ ಮಾಜಿ ಸಿಎಂ ಹಾಗೂ ಕೇಂದ್ರ ಉಕ್ಕು ಖಾತೆ ಸಚಿವ ಹೆಚ್ ಡಿ ಕುಮಾರಸ್ವಾಮಿ ಶಿವಮೊಗ್ಗಕ್ಕೆ ಬಂದಿದ್ದರು. ಈ ವೇಳೆ ಅವರಿಗೆ ಶಿವಮೊಗ್ಗ ನಗರ ಶಾಸಕ ಎಸ್ ಎನ್ ಚನ್ನಬಸಪ್ಪ (Shivamogga City MLA S N Channabasappa) ಮನವಿಯೊಂದನ್ನ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಕೈಗಾರಿಕಾ ಸ್ಟಾರ್ಟ್‌ಸಿಟಿಯಾಗಿ ಶಿವಮೊಗ್ಗ ಮಹಾನಗರವನ್ನು ಆಯ್ಕೆ ಮಾಡಿ ಎಂದು ಕೇಂದ್ರ ಸಚಿವರ ಮುಂದೆ ಶಾಸಕ ಎಸ್.ಎನ್ ಚನ್ನಬಸಪ್ಪ ಇಟ್ಟಿದ್ದಾರೆ.
National Industrial Corridor Development Programme
ಕೇಂದ್ರ ಸಚಿವರನ್ನ ಭೇಟಿ ಈ ಬಗ್ಗೆ ಮನವಿ ಸಲ್ಲಿಸಿದ ಅವರು, ಭಾರತ ಸರ್ಕಾರದ ( Government of India)ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಯು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ಅಭಿವೃದ್ಧಿ ಕಾರ್ಯಕ್ರಮಗಳ 28602 ಕೋಟಿ ರೂಪಾಯಿಗಳ ಅಂದಾಜು ಹೂಡಿಕೆಯೊಂದಿಗೆ ದೇಶದ 12 ಕೈಗಾರಿಕಾ ಸ್ಮಾಟ್ ಸಿಟಿಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ.
Industrial Smart Cities -ಕೈಗಾರಿಕಾ ಸ್ಮಾರ್ಟ್ ಸಿಟಿ
ಈ ಯೋಜನೆಯು 10 ರಾಜ್ಯಗಳಲ್ಲಿ ವ್ಯಾಪಿಸಿದ್ದು, 1 ಮಿಲಿಯನ್ ಪ್ರತ್ಯಕ್ಷ ಉದ್ಯೋಗಗಳನ್ನು ಮತ್ತು 3 ಮಿಲಿಯನ್ ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಮಹಾನಗರವನ್ನ ಕೈಗಾರಿಕ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ಮೊದಲನೇ ಹಂತದಲ್ಲಿ ಈಗಾಗಲೇ (12 industrial smart cities list)12 ನಗರಗಳ ಪೈಕಿ 10 ನಗರಗಳನ್ನು ಘೋಷಿಸಿದ್ದು, ಶಿವಮೊಗ್ಗ ನಗರವನ್ನು ಈ ಯೋಜನೆಯಡಿ ಸೇರಿಸಿ ಕರ್ನಾಟಕ ರಾಜ್ಯದಲ್ಲಿ ಕೈಗಾರಿಕಾ ಕಾರಿಡಾರ್‌ಸ್ಟಾರ್ಟ್ ಸಿಟಿಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.