indian Railways : ರೈಲು ಪ್ರಯಾಣಿಕರಿಗೆ ಶುಭಸುದ್ದಿ: ಕುಡಿಯುವ ನೀರಿನ ಬೆಲೆ ಇಳಿಕೆ, ಹೊಸ ದರಗಳು ಜಾರಿ
ಭಾರತೀಯ ರೈಲ್ವೆ ಇಲಾಖೆಯು ರೈಲು ಪ್ರಯಾಣಿಕರಿಗೆ ಮಹತ್ವದ ನೆರವು ನೀಡಿದೆ. ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಮಾರಾಟವಾಗುವ ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ಕಡಿಮೆಗೊಳಿಸಿ ಆದೇಶ ಹೊರಡಿಸಲಾಗಿದೆ. ಪರಿಷ್ಕೃತ ಬೆಲೆಗಳು ಸೆಪ್ಟೆಂಬರ್ 22, 2025 ರಿಂದಲೇ ಜಾರಿಗೆ ಬಂದಿವೆ.
ರೈಲ್ವೆ ಮಂಡಳಿಯ ವಾಣಿಜ್ಯ ಸುತ್ತೋಲೆ ಸಂಖ್ಯೆ 18/2025 ರ ಪ್ರಕಾರ, ಈಗ ಒಂದು ಲೀಟರ್ ‘ರೈಲ್ ನೀರ್’ ಅಥವಾ ಇತರ ಬ್ರ್ಯಾಂಡ್‌ಗಳ ಕುಡಿಯುವ ನೀರಿನ ಬಾಟಲಿಯು ₹15 ರ ಬದಲಿಗೆ ₹14 ಕ್ಕೆ ಲಭ್ಯವಾಗಲಿದೆ. ಅದೇ ರೀತಿ, 500 ಮಿಲಿ ಬಾಟಲಿಯ ಬೆಲೆಯನ್ನು ₹10 ರಿಂದ ₹9 ಕ್ಕೆ ಇಳಿಸಲಾಗಿದೆ. ಈ ಆದೇಶವು ರೈಲು ನಿಲ್ದಾಣಗಳು ಮತ್ತು ರೈಲುಗಳಲ್ಲಿ ಮಾರಾಟವಾಗುವ ಎಲ್ಲಾ ರೀತಿಯ ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿಗಳಿಗೆ ಅನ್ವಯಿಸುತ್ತದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ