SHIVAMOGGA | MALENADUTODAY NEWS | ಮಲೆನಾಡು ಟುಡೆ Jan 5, 2025
ಶಿವಮೊಗ್ಗದ ದಂತ ತಜ್ಞ ಡಾಕ್ಟರ್ ಗೌತಮ್ ಅವರು 2025-26 ನೇ ಸಾಲಿನ ಭಾರತೀಯ ದಂತ ವೈದ್ಯಕೀಯ ಸಂಘ (IDA) ಶಿವಮೊಗ್ಗ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರೋಟರಿ ಬ್ಲಡ್ ಬ್ಯಾಂಕ್ ಸಮಿತಿಯ ಟ್ರಸ್ಟಿ, ಗೋಪಾಳಗೌಡ ನಿವಾಸಿಗಳ ಸಂಘದ ನಿರ್ದೇಶಕರಾಗಿಯು ಕೆಲಸ ಮಾಡಿರುವ ಡಾ.ಗೌತಮ್ 2021 ರಲ್ಲಿ ಮೆಗ್ಗಾನ್ ಆಡಳಿತ ಮಂಡಳಿಗೆ ಸರ್ಕಾರಿ ನಾಮನಿರ್ದೇಶಕರಾಗಿಯು ನೇಮಕಗೊಂಡಿದ್ದರು.
ಇನ್ನೊಂದೆಡೆ 2025ನೇ ಸಾಲಿನ ಜೆಸಿಐ ಶಿವಮೊಗ್ಗ ಭಾವನದ 26ನೇ ಅಧ್ಯಕ್ಷರಾಗಿ ಶಿವಮೊಗ್ಗ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕಿ ರೇಖಾ ರಂಗನಾಥ್ ಆಯ್ಕೆಯಾಗಿದ್ದಾರೆ. ವಿವಿಧ ಸಂಘ ಸಂಸ್ಥೆಗಳಲ್ಲಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಇವರನ್ನ ಜೆ ಸಿ ಐ ಶಿವಮೊಗ್ಗ ಭಾವನದ ಸರ್ವ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
SUMMARY | Dr. Gautam, a dentist from Shimoga, has been elected as the new president of the Indian Dental Association (IDA) Shimoga district for the year 2025-26. Rekha Ranganath has been elected as the president of JCA Bhavana, Shimoga
KEY WORDS | dentist Dr Gautam, elected as the new president , Indian Dental Association, IDA, Shimoga district , Rekha Ranganat, president of JCA Bhavana, Shimoga