ಕ್ಯಾನ್ಸರ್ ಗೆ ಸಂಬಂಧಿಸಿದ ಆಪರೇಷನ್ ಗಾಗಿ ಅಮೆರಿಕಕ್ಕೆ ತೆರಳಿದ್ದ ಶಿವರಾಜಕುಮಾರ್ ರವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಇವತ್ತು ವಿಡಿಯೋ ಒಂದನ್ನ ರಿಲೀಸ್ ಮಾಡಿರುವ ಶಿವಣ್ಣ ದಂಪತಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ತಮ್ಮ ಅಧಿಕೃತ ಟ್ವಿಟ್ಟರ್ ಅಕೌಂಟ್ ನಲ್ಲಿ ಮಾತನಾಡಿರುವ ಶಿವಣ್ಣ ಕ್ಯಾನ್ಸರ್ ಗುಣವಾಗಿದೆ..ಬ್ಲಾಡರ್ ಬದಲಾಯಿಸಿದ್ದು, ಈ ಸಂಬಂಧ ಆಪರೇಷನ್ ನಡೆಸಲಾಗಿದೆ..ನಡೆದಿದ್ದು ಕಿಡ್ನಿಟ್ರಾನ್ಸ್ಪೆಂಟ್ ಅಲ್ಲ..ಈ ಬಗ್ಗೆ ಗೊಂದಲ ಬೇಡ ಎಂದಿದ್ದಾರೆ..ಅಲ್ಲದೆ ನಾನು ವಾಪಸ್ ಬರುತ್ತಿದ್ದೇನೆ ಎಂದ ಶಿವಣ್ಣ ಮಧು ಬಂಗಾರಪ್ಪರವರು ಸೇರಿದಂತೆ ಹಲವರ ಗುಣಗಾನಮಾಡಿದ್ದಾರೆ.
ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಕ್ಕೆ ನಾನು ಚಿರಋಣಿ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು! #2025 pic.twitter.com/4oyg2uXfjg— DrShivaRajkumar (@NimmaShivanna) January 1, 2025