Hanuman Temple Festival ಮೈದೊಳಲು ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ ಆತಂಕದ ಭವಿಷ್ಯ – “ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರ | ಏನಿದರ ಅರ್ಥ
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಇಂದು ಹನುಮಂತ ದೇವರ ಕಾರ್ಣಿಕೋತ್ಸವ ನಡೆದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಎಚ್ಚರಿಕೆಯ ಸಂದೇಶ ನೀಡಿರುವ ಗಣಮಗ, “ಶಿವನ ತುರುಬಿಗೆ ಪಂಜರದ ಗಿಳಿ ಹಾರಿತ್ತು ಎಚ್ಚರ” ಎಂಬ ಅಚ್ಚರಿಯ ಕಾರ್ಣಿಕವನ್ನು ನುಡಿದಿದ್ದಾರೆ.
ಮೈದೊಳಲು ಗ್ರಾಮದ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರದ ಕಂಬವೇರಿ ಗಣಮಗ ನುಡಿದ ಈ ಕಾರ್ಣಿಕ, ಸ್ಥಳೀಯರ ಪ್ರಕಾರ ಹಲವು ಗಂಭೀರ ಪರಿಣಾಮಗಳನ್ನು ಸೂಚಿಸುತ್ತಿದೆ. ಅವರ ವಿಶ್ಲೇಷಣೆಯ ಪ್ರಕಾರ, ಈ ಬಾರಿ ಮುಂಗಾರಿಗಿಂತ ಹಿಂಗಾರು ಜೋರಾಗಲಿದ್ದು, ಅತಿವೃಷ್ಟಿಯಿಂದಾಗಿ ರೈತರ ಕೃಷಿ ಚಟುವಟಿಕೆಗಳಿಗೆ ಗಂಭೀರ ಹಿನ್ನಡೆಯಾಗುವುದು. ಇದರ ಜೊತೆಗೆ, ರಾಜ್ಯ ರಾಜಕೀಯದಲ್ಲಿ ತಲ್ಲಣ ನಿಶ್ಚಿತ ಎಂದು ಹೇಳಿದ್ದಾರೆ.
ಪ್ರತಿ ವರ್ಷ ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ ನುಡಿಯುವ ಭವಿಷ್ಯವನ್ನು ಜನರು ಬಹಳ ಗಂಭೀರವಾಗಿ ಪರಿಗಣಿಸುತ್ತಾರೆ.


