Gst cut :ನವದೆಹಲಿ:ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ಸುಧಾರಣೆಗಳ ಅಡಿಯಲ್ಲಿ ಕಾರುಗಳ ಮೇಲಿನ ತೆರಿಗೆ ದರವನ್ನು ಇಳಿಕೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿವೆ. ಇದರಿಂದಾಗಿ ಸಣ್ಣ ಕಾರುಗಳು 18% ಮತ್ತು ದೊಡ್ಡ ಕಾರುಗಳು 40% ರಷ್ಟು ಜಿಎಸ್‌ಟಿ ವ್ಯಾಪ್ತಿಗೆ ಬರಲಿವೆ.
ಕೋಟಕ್ ಇನ್‌ಸ್ಟಿಟ್ಯೂಶನಲ್ ಈಕ್ವಿಟೀಸ್ ಪ್ರಕಾರ, ಈ ಹೊಸ ನಿರ್ಧಾರದಿಂದಾಗಿ ವಾಹನಗಳ ಆನ್-ರೋಡ್ ಬೆಲೆಗಳು ಸರಾಸರಿ 5-8% ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಬಹುತೇಕ ಎಲ್ಲಾ ಪ್ರಮುಖ ಕಂಪನಿಗಳು ಈ ತೆರಿಗೆ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿದ್ದು, ಸಾವಿರಾರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿಗಳವರೆಗೆ ಬೆಲೆ ಕಡಿತ ಘೋಷಿಸಿವೆ.
Gst cut :ಯಾವ್ಯಾವ ಕಾರುಗಳ ಬೆಲೆ ಎಷ್ಟೆಲ್ಲಾ ಕಡಿತವಾಗಿದೆ
Gst cut ಮಹೀಂದ್ರ ಅಂಡ್ ಮಹೀಂದ್ರ: ಸೆಪ್ಟೆಂಬರ್ 6 ರಂದು ಬೆಲೆ ಕಡಿತ ಘೋಷಿಸಿದೆ. ಬೊಲೆರೊಗೆ ₹1.27 ಲಕ್ಷ, ಸ್ಕಾರ್ಪಿಯೊಗೆ ₹1.45 ಲಕ್ಷ, ಥಾರ್ ರಾಕ್ಸ್‌ಗೆ ₹1.33 ಲಕ್ಷ ಮತ್ತು ಎಕ್ಸ್‌ಯುವಿ700ಗೆ ₹1.43 ಲಕ್ಷದಷ್ಟು ಬೆಲೆ ಇಳಿದಿದೆ. ಗ್ರಾಹಕರು ₹1.56 ಲಕ್ಷದವರೆಗೆ ಉಳಿತಾಯ ಮಾಡಬಹುದು.
ಟಾಟಾ ಮೋಟಾರ್ಸ್: ನೆಕ್ಸಾನ್ ಮೇಲೆ ₹1.55 ಲಕ್ಷ ಮತ್ತು ಸಫಾರಿ ಮೇಲೆ ₹1.45 ಲಕ್ಷದಷ್ಟು ಬೆಲೆ ಇಳಿಕೆಯಾಗಿದೆ. ವಾಣಿಜ್ಯ ವಾಹನಗಳಾದ ಹೆವಿ ಸಿಸಿಗಳ ಮೇಲೆ ₹2.8-4.65 ಲಕ್ಷದವರೆಗೆ ಮತ್ತು ಬಸ್‌ಗಳ ಮೇಲೆ ₹1.2-4.35 ಲಕ್ಷದವರೆಗೆ ಬೆಲೆ ಇಳಿದಿದೆ. ಹೊಸ ಬೆಲೆಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ.
ರೆನಾಲ್ಟ್: ಹೊಸ ಬೆಲೆಗಳು ಸೆಪ್ಟೆಂಬರ್ 22 ರಿಂದ ಅನ್ವಯವಾಗಲಿದೆ. ಕ್ವಿಡ್ ಬೆಲೆ ₹4.29 ಲಕ್ಷದಿಂದ ಆರಂಭವಾಗಲಿದ್ದು, ಟ್ರೈಬರ್ ಬೆಲೆ ₹78,000 ಮತ್ತು ಕಿಗರ್ ಬೆಲೆ ₹96,395 ರವರೆಗೆ ಕಡಿಮೆಯಾಗಿದೆ.
ಹ್ಯುಂಡೈ ಮೋಟಾರ್ ಇಂಡಿಯಾ: ಸೆಪ್ಟೆಂಬರ್ 22 ರಿಂದ ಹೊಸ ದರ ಜಾರಿಗೆ ಬರಲಿದೆ. ಟುಸಾನ್ ಬೆಲೆ ₹2.40 ಲಕ್ಷ, ವೆನ್ಯೂ ₹1.23 ಲಕ್ಷ, ಐ20 ₹98,000 ಮತ್ತು ಅಲ್ಕಾಜಾರ್ ₹75,000ದಷ್ಟು ಕಡಿಮೆಯಾಗಿದೆ.
ಟೊಯೋಟಾ: ಹೊಸ ಬೆಲೆಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ. ಫಾರ್ಚೂನರ್ ಬೆಲೆ ₹3.49 ಲಕ್ಷ, ಲೆಜೆಂಡರ್ ₹3.34 ಲಕ್ಷ ಮತ್ತು ಇನೋವಾ ಕ್ರಿಸ್ಟಾ ₹1.8 ಲಕ್ಷದಷ್ಟು ಅಗ್ಗವಾಗಿವೆ.
ಸ್ಕೋಡಾ: ಜಿಎಸ್‌ಟಿ ಪ್ರಯೋಜನದ ಜೊತೆಗೆ ಸೆಪ್ಟೆಂಬರ್ 21ರ ವರೆಗೆ ₹2.5 ಲಕ್ಷದವರೆಗೆ ರಿಯಾಯಿತಿ ಘೋಷಿಸಿದೆ. ಕುಶಾಕ್ ₹66,000, ಸ್ಲಾವಿಯಾ ₹63,000 ಮತ್ತು ಕೋಡಿಯಾಕ್ ₹3.3 ಲಕ್ಷ ಅಗ್ಗವಾಗಿದೆ.
ಆಡಿ ಮತ್ತು ಮರ್ಸಿಡಿಸ್: ಆಡಿ ಕಾರುಗಳ ಬೆಲೆ ₹2.6 ಲಕ್ಷದಿಂದ ₹7.8 ಲಕ್ಷದವರೆಗೆ, ಮರ್ಸಿಡಿಸ್ ಕಾರುಗಳ ಬೆಲೆ ₹2.6 ಲಕ್ಷದಿಂದ ₹11 ಲಕ್ಷದವರೆಗೆ ಕಡಿಮೆಯಾಗಿದೆ.
ನಿಸ್ಸಾನ್: ಮ್ಯಾಗ್ನೈಟ್ ಕಾರಿನ ಮೇಲೆ ₹1 ಲಕ್ಷದವರೆಗೆ ಬೆಲೆ ಇಳಿಕೆಯಾಗಿದೆ. ಇದರ ಸಿಎನ್‌ಜಿ ಕಿಟ್ ಕೂಡ ₹71,999ಕ್ಕೆ ದೊರೆಯಲಿದೆ.
ಮಾರುತಿ ಸುಜುಕಿ: ಆಲ್ಟೊ ಕೆ10, ವ್ಯಾಗನ್ ಆರ್, ಸ್ವಿಫ್ಟ್ ಮತ್ತು ಎರ್ಟಿಗಾ ಸೇರಿದಂತೆ ಹಲವು ಮಾದರಿಗಳ ಮೇಲೆ ₹40,000 ದಿಂದ ₹2.25 ಲಕ್ಷದವರೆಗೆ ಬೆಲೆ ಕಡಿತ ಮಾಡಿದೆ.
ಬಜಾಜ್, ಹೀರೋ ಮತ್ತು ಟಿವಿಎಸ್ ಸೇರಿದಂತೆ ದ್ವಿಚಕ್ರ ವಾಹನ ತಯಾರಕರೂ ಸಹ ಈ ಪ್ರಯೋಜನವನ್ನು ಗ್ರಾಹಕರಿಗೆ ನೀಡಿದ್ದಾರೆ.