First in Karnataka Blindness Free Shivamogga ಶಿವಮೊಗ್ಗದಲ್ಲಿ “ಅಂಧತ್ವ-ಮುಕ್ತ ಶಿವಮೊಗ್ಗ” ಯೋಜನೆಗೆ ಚಾಲನೆ: ಕ್ರಾಂತಿಕಾರಿ ಹೆಜ್ಜೆ!
First in Karnataka Blindness Free Shivamogga ಶಿವಮೊಗ್ಗ: ತಡೆಗಟ್ಟಬಹುದಾದ ಅಂಧತ್ವವನ್ನು (Preventable Blindness) ತಡೆಯುವ ಉದ್ದೇಶಿತ ಗುರಿಯೊಂದಿಗೆ ಶಿವಮೊಗ್ಗ ಶಿವಮೊಗ್ಗ ಜಿಲ್ಲಾಡಳಿತವು “ಅಂಧತ್ವ-ಮುಕ್ತ ಶಿವಮೊಗ್ಗ” ಹೆಸರಿನ ಯೋಜನೆಗೆ ಚಾಲನೆ ನೀಡಿದೆ. ರಾಜ್ಯದಲ್ಲಿ ಇದು ಮೊದಲ ಪ್ರಯೋಗವಾಗಿದೆ. ಇತ್ತೀಚೆಗೆ ಈ ಯೋಜನೆಗೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದ್ದರು.. ನೇತ್ರ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಜನರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಅವರಿಗೆ ಚಿಕಿತ್ಸೆ ನೀಡುವ ವಿಧಾನವನ್ನು ಈ ಯೋಜನೆ ಹೊಂದಿದೆ.

“ಅಂಧತ್ವ-ಮುಕ್ತ ಶಿವಮೊಗ್ಗ” ಯೋಜನೆ ಅಡಿಯಲ್ಲಿ ಆಶಾ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಕಣ್ಣಿನ ಆರೋಗ್ಯ ತಪಾಸಣೆ ನಡೆಸುತ್ತಾರೆ. ಅಲ್ಲದೆ ವಿವಿಧ ಪ್ರಶ್ನೆಗಳ ಮೂಲಕ, ಕಣ್ಣಿನ ಸಮಸ್ಯೆ ಹೊಂದಿದವರನ್ನು ಉಪ-ಆರೋಗ್ಯ ಕೇಂದ್ರಗಳಿಗೆ ಬರುವಂತೆ ಮಾಡುತ್ತಾರೆ. ಆನಂತರ ಅಲ್ಲಿ ಅವರಿಗೆ ಕಣ್ಣಿಗೆ ಸಂಬಂಧಿಸಿದ ಚಿಕಿತ್ಸೆ ನೀಡಲಾಗುತ್ತದೆ. ಇದು ಎಲ್ಲ ವರ್ಗದ ಜನರಿಗೂ ಉಚಿತವಾಗಿ ಲಭ್ಯವಾಗಲಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಎನ್. ಹೇಮಂತ್ ಅವರ ಮಾರ್ಗದರ್ಶನದಲ್ಲಿ ಆರಂಭಗೊಂಡಿರುವ ಯೋಜನೆಯಲ್ಲಿ ತಜ್ಞ ವೈದ್ಯರು ಗ್ರಾಮ ಪಂಚಾಯತ್‌ಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ (PHCs) ಮೂಲಕ ಹಳ್ಳಿಗಳಿಗೆ ಭೇಟಿ ನೀಡಲಿದ್ದಾರೆ.


ಅಂಧತ್ವ-ಮುಕ್ತ ಶಿವಮೊಗ್ಗ, ಕಣ್ಣಿನ ಆರೋಗ್ಯ, ಉಚಿತ ಚಿಕಿತ್ಸೆ, ನೇತ್ರ ತಪಾಸಣೆ, ,Blindness Free Shivamogga, Eye Health, Free Treatment, #BlindnessFreeShivamogga #EyeHealth #KarnatakaHealth #FreeEyeCare #Shivamogga #PublicHealth #VisionForAll #ASHAWorkers