Fighter Jet in shivamogga ಶಿವಮೊಗ್ಗಕ್ಕೆ ಮೊದಲ ಬಾರಿಗೆ ಯುದ್ಧ ವಿಮಾನ: ಶಾಸಕರು ಮತ್ತು ಆಯುಕ್ತರಿಂದ ಸ್ಥಳ ಪರಿಶೀಲನೆ
ಶಿವಮೊಗ್ಗ ನಗರಕ್ಕೆ ಮೊದಲ ಬಾರಿಗೆ ಯುದ್ಧ ವಿಮಾನವೊಂದು ಆಗಮಿಸುತ್ತಿದ್ದು, ಸಾರ್ವಜನಿಕ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಲು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರೊಂದಿಗೆ ಇಂದು ಅಲ್ಲಮಪ್ರಭು ಮೈದಾನಕ್ಕೆ (ಫ್ರೀಡಂ ಪಾರ್ಕ್) ಭೇಟಿ ನೀಡಿದರು.
ಯುದ್ಧ ವಿಮಾನ ಪ್ರದರ್ಶನಕ್ಕೆ ಸೂಕ್ತ ಸ್ಥಳ ನಿಗದಿ, ಸಾರ್ವಜನಿಕರ ಸುಗಮ ವೀಕ್ಷಣೆಗೆ ಅಗತ್ಯ ವ್ಯವಸ್ಥೆಗಳು, ಭದ್ರತೆ ಹಾಗೂ ಇತರೆ ಮಹತ್ವದ ಅಂಶಗಳ ಕುರಿತುಸಮಾಲೋಚನೆ ನಡೆಸಿದರು. ಮುಂಬರುವ ಯುದ್ಧ ವಿಮಾನದ ಪ್ರದರ್ಶನವನ್ನು ಯಶಸ್ವಿಗೊಳಿಸಲು ಬೇಕಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಸಿದ್ಧತೆಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಈಗಾಗಲೇ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಭಾರತೀಯ ಸೇನೆ ಬಳಸುತ್ತಿದ್ದ ಯುದ್ಧ ಟ್ಯಾಂಕರ್ ಅನ್ನು ಸ್ಥಾಪಿಸಲಾಗಿದೆ. ಇದರ ಸನಿಹದಲ್ಲೇ ಯುದ್ಧ ವಿಮಾನ ಸ್ಥಾಪಿಸುವ ಕುರಿತು ಇಂದು ಸ್ಥಳ ಪರಿಶೀಲನೆ ನಡೆಸಲಾಯಿತು.


