Fake Currency Four Arrest in Davanagere ಖೋಟಾ ನೋಟು ಜಾಲ ಭೇದಿಸಿದ ಪೊಲೀಸರು; ನಾಲ್ವರ ಬಂಧನ
ದಾವಣಗೆರೆ, ಜುಲೈ 24, 2025: ದಾವಣಗೆರೆ ಜಿಲ್ಲೆಯಲ್ಲಿ ಖೋಟಾ ನೋಟು (fake currency) ಚಲಾವಣೆ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಬಂಧಿತರಿಂದ ಅವರಿಂದ ₹500 ಮತ್ತು ₹200 ಮುಖಬೆಲೆಯ, ಒಟ್ಟು ₹3.75 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಡುವಿನ ತಾಂಡಾ ನಿವಾಸಿ ಸಂತೋಷಕುಮಾರ, ಕೊಟ್ಟೂರು ತಾಲ್ಲೂಕಿನ ಬೇವೂರು ಗ್ರಾಮದ ನಿವಾಸಿಗಳಾದ ವೀರೇಶ ಬಿ.ಪಿ., ಹನುಮಂತಪ್ಪ, ಹಾಗೂ ದಾವಣಗೆರೆ ತಾಲ್ಲೂಕಿನ ಕುಕ್ಕವಾಡ ಗ್ರಾಮದ ಕುಬೇರಪ್ಪ ಎಂದು ಗುರುತಿಸಲಾಗಿದೆ.
ಆರೋಪಿಗಳ ಪೈಕಿ ಒಬ್ಬನಾದ ಕುಬೇರಪ್ಪನ ವಿರುದ್ಧ ಈ ಹಿಂದೆ ಹರಿಹರ, ಹೊಸಪೇಟೆ ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ಖೋಟಾ ನೋಟು ಹೊಂದಿರುವ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ


Davanagere police have arrested four individuals and seized counterfeit notes worth ₹3.75 lakhs.
ಖೋಟಾ ನೋಟು, ದಾವಣಗೆರೆ, ನಕಲಿ ನೋಟು, ಪೊಲೀಸರು, ಬಂಧನ, ಅಪರಾಧ ಸುದ್ದಿ, ಹೂವಿನಹಡಗಲಿ, ಕೊಟ್ಟೂರು, ಕುಬೇರಪ್ಪ , Fake currency, Davanagere, counterfeit notes, police arrest, crime news, Huvinahadagali, Kottur, Kubera , #Davanagere, #FakeCurrency, #CrimeNews, #PoliceArrest, #CounterfeitNotes, #Karnataka, #Fraud