Dog attack
ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ಏಕಾಎಕಿ ದಾಳಿ ನಡೆಸಿರುವ ಘಟನೆ ಸಾಗರ ನಗರ ಸಭೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನಾಯಿ ದಾಳಿಯಿಂದಾಗಿ ಬಾಲಕನ ಕಣ್ಣು ಬಾಯಿ ಮುಖ ಸೇರಿದಂತೆ ಅನೇಕ ಭಾಗಗಳಲ್ಲಿ ಗಾಯವಾಗಿದೆ. ಬಾಲಕನಿಗೆ ದಾಳಿ ನಡೆಸಿದ ನಂತರ ಮಹಿಳೆಯ ಮೇಲೂ ಬೀದಿನಾಯಿ ದಾಳಿ ಮಾಡಿದೆ. ನಗರಸಭೆಯ ಆಡಳಿತ ಹಾಗ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.