ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ, ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ವಾರ್ತಾ ಇಲಾಖೆಯ ಕರ್ನಾಟಕ ವಾರ್ತೆಯಲ್ಲಿ ಈ ಬಗ್ಗೆ ಪ್ರಕಟಣೆಯನ್ನು ನೀಡಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದಲ್ಲಿ ಬರುವ ವಿವಿಧ ಕಾರ್ಯಕ್ರಮದಲ್ಲಿ ಖಾಲಿಯಿರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆರ್ಹರಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಆಹ್ವಾನ
- ಎನ್‌ಪಿಎನ್‌ಸಿಸಿ ಕಾರ್ಯಕ್ರಮದಡಿ ಎಂಬಿಬಿಎಸ್ ವೈದ್ಯರ 10 ಹುದ್ದೆಗಳಿಗೆ 3 ವರ್ಷ ಕೆಲಸ ಮಾಡಿದ ಅನುಭವವಿರುವ ಎಂಬಿಬಿಎಸ್ ವಿದ್ಯಾರ್ಹತೆಯಿರಬೇಕು.
- ಶುಶ್ರೂಷಾಧಿಕಾರಿಯ 1 ಹುದ್ದೆಗೆ ಜಿಎನ್‌ಎಂ ವಿದ್ಯಾರ್ಹತೆ ಮತ್ತು 2 ವರ್ಷ ಕೆಲಸ ಮಾಡಿದ ಅನುಭವವಿರಬೇಕು.
- ಎನ್‌ಪಿಹೆಚ್‌ಸಿಇ ಕಾರ್ಯಕ್ರಮದಡಿ ತಜ್ಞವೈದ್ಯರ (ಎಂ.ಡಿ. ಇಂಟರ್ನಲ್ ಮೆಡಿಸಿನ್/ಜನರಲ್ ಮೆಡಿಸಿನ್) 1 ಹುದ್ದೆಗೆ ಎಂಬಿಬಿಎಸ್-ಎಚಿಡಿ(ಇಂಟರ್ನಲ್ ಮೆಡಿಸಿನ್/ಜಿಎಂ) ವಿದ್ಯಾರ್ಹತೆ ಹಾಗೂ 3 ವರ್ಷ ಕಾರ್ಯ ನಿರ್ವಹಿಸಿದ ಅನುಭವವಿರಬೇಕು.
ಆಸಕ್ತರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಬಿ.ಹೆಚ್.ರಸ್ತೆ ಇಲ್ಲಿ ಸೆ. 22 ರಂದು ನಡೆಯುವ ನೇರ ಸಂದರ್ಶನಕ್ಕೆ ಬೆಳಗ್ಗೆ 11.00ಕ್ಕೆ ದಾಖಲೆಗಳ ಮೂಲ ಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ಕೆಲಸದ ವೇಳೆಯಲ್ಲಿ ಕಚೇರಿಯನ್ನು ಸಂಪರ್ಕಿಸುವುದು.
ಎಂಬಿಬಿಎಸ್ ವೈದ್ಯರಿಗೆ ವಿಶೇಷ ಸೂಚನೆ : ಎನ್.ಸಿ.ಡಿ ಕ್ಲಿನಿಕ್ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದಲ್ಲಿ ಪ್ರತಿ ತಿಂಗಳ 3ನೇ ಸೋಮವಾರದಂದು ವೈದ್ಯರ ಮತ್ತು ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Direct Interview for Health Jobs in Shivamogga
