Dharmasthala : ಧರ್ಮಸ್ಥಳದ ಪ್ರಕರಣವನ್ನು ಯಾವುದೇ ಕಾರಣಕ್ಕೂ ಮುಚ್ಚಿ ಹಾಕಬಾರದು ಈ ಕೂಡಲೇ ರಾಜ್ಯ ಸರ್ಕಾರ ಈ ಪ್ರಕರಣವನ್ನು ಎನ್ ಐ ಎ (ರಾಷ್ಟ್ರೀಯ ತನಿಖಾ ದಳ ) ಗೆ ವಹಿಸಬೇಕು ಎಂದು ಮಾಜಿ ಡಿಸಿಎಂ ಕೆ,ಎಸ್ ಈಶ್ವರಪ್ಪ ಹೇಳಿದರು.
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಬೆಳವಣಿಗೆಯಲ್ಲಿ ಧರ್ಮಸ್ಥಳ ಪ್ರಕರಣ ಬಗ್ಗೆ ಜನರಿಗೆ ಇದ್ದ ಸಾಕಷ್ಟು ಅನುಮಾನಗಳು ತೀರಿ ಹೋಗಿದೆ. ಸುಜಾತ ಭಟ್, ಚಿನ್ನಯ್ಯ ಇವರುಗಳ ಹೇಳಿಕೆಗಳ ನಂತರ ರಾಜ್ಯದ ಜನ ಧರ್ಮಸ್ಥಳದ ಬಗ್ಗೆ ಸಾಕಷ್ಟು ಗೊಂದಲವನ್ನು ಇಟ್ಟುಕೊಂಡಿದ್ದರು. ಆದರೆ ನಂತರ ಅವರೆಲ್ಲರೂ ಸಹ ನಮಗೆ ಯಾರೂ ಹೀಗೆ ಹೇಳಿ ಎಂದು ಹೇಳಿಕೊಟ್ಟಿದ್ದಾರೆ ನಾವು ಹೇಳಿದ್ದೇವೆ, ಎಂಬ ಹೇಳಿಕೆ ಕೊಟ್ಟ ತಕ್ಷಣ ಸಮಸ್ಯೆ ಪರಿಕಾರ ಸಿಕ್ಕಂತಾಯಿತು. ಇವರುಗಳ ಈ ಹೇಳಿಕೆ ಮೂಲಕ ಇದರ ಹಿಂದೆ ದೊಡ್ಡ ಷಡ್ಯಂತರ ಇರುವುದು ಗೊತ್ತಾಗಿದೆ. ಈ ಪ್ರಕರಣದ ಹಿಂದೆ ಇರುವ ಪಾತ್ರದಾರಿಗಳು, ಸೂತ್ರದಾರಿಗಳು ಎನ್ ಎ ತನಿಖೆಯಿಂದ ಹೊರಬರಬೇಕು ಎಂದು ಆಗ್ರಹಿಸಿದರು.
Dharmasthala ಚಿನ್ನಯ್ಯ ಬೆಳಿಗ್ಗೆ ಗುಂಡಿ ತೆಗೆಯಲು ಹೇಳುತ್ತಿದ್ದ ರಾತ್ರಿ ಹೊತ್ತು ಸೂತ್ರದಾರಿಗಳ ಜೊತೆ ಸಭೆ ನಡೆಸುತ್ತಿದ್ದ. ಮೇಲ್ನೋಟಕ್ಕೆ ಸೂತ್ರದಾರಿಗಳೆಂದರೆ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮುಟ್ಟಣ್ಣನವರು, ಇವರುಗಳ ಜೊತೆ ಯುಟ್ಯೂಬರ್ ಎಂ ಡಿ ಸಮೀರ್ನನ್ನು ಸಹ ಎಸ್ ಐ ಟಿ ಯವರು ಅಧಿಕೃತವಾಗಿ ಬಂಧಿಸಿ ವಿಚಾರಣೆ ನಡೆಸಿ ಅವರಿಂದ ಆದ ತಪ್ಪುಗಳನ್ನು ಬೆಳಕಿಗೆ ತರಬೇಕು ಎಂದು ಆಗ್ರಹಿಸಿದರು.
ಎಸ್ ಐಟಿ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ದಿಂದ ಅನೇಕ ವಿಷಯಗಳು ಹೊರ ಬಂದಿದೆ.ಅದು ಸಾಕಾಗುವುದಿಲ್ಲ. ಇಡೀ ಪ್ರಕರಣವನ್ನು ಎನ್ ಐ ಎ ಗೆ ಕೊಡಬೇಕು. ಧರ್ಮಸ್ಥಳಕ್ಕೆ ಕಳಂಕ ತರಲು ಹೊರಟವರಿಗೆ ಕಠಿಣ ಸಜೆ ಆಗಬೇಕು.ಆಗ ಮಾತ್ರ ಹಿಂದೂಗಳಿಗೆ ವೀರೇಂದ್ರ ಹೆಗ್ಗಡೆಯವರಿಗೆ ನ್ಯಾಯ ಸಿಕ್ಕಂತೆ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಈ ಪ್ರಕರಣವನ್ನು ಹೀಗೆ ಎಳೆದುಕೊಂಡು ಹೋಗಿ ಮುಚ್ಚಿ ಹಾಕಲು ಪ್ರಯತ್ನ ಪಡಬಾರದು. ಆದ್ದರಿಂದ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಅರೆಸ್ಟ್ ಮಾಡಿ ಒದ್ದರೆ ಬಾಯಿ ಬಿಡುತ್ತಾರೆ. ಇವರೆಲ್ಲರಿಗೂ ಮಂಪರು ಪರೀಕ್ಷೆ ಮಾಡಬೇಕು ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದರು.
Dharmasthala
ಈ ವಿಚಾರದಲ್ಲಿ ಒಂದು ಹಿಂದೂ ದೇವಸ್ಥಾನ ಹಾಗೂ ಎಂ ಡಿ ಸಮೀರ್ ಏನು ಸಂಬಂಧ ತಿಳಿದಿಲ್ಲ, ಆತ ಇದೇ ರೀತಿ ಷಡ್ಯಂತ್ರ ಮುಸಲ್ಮಾನರ ಪುಣ್ಯ ಕ್ಷೇತ್ರದ ಬಗ್ಗೆ ಹಾಗೂ ಮೌಲ್ವಿಗಳ ಬಗ್ಗೆ ಮಾಡಿದ್ದರೆ ಈಗಾಗಲೇ ಅವರು ಬೆಂಕಿ ಹಂಚುತ್ತಿದ್ದರು. ಆದರೆ ಹಿಂದೂ ಸಮಾಜ ಇದನ್ನು 12 ವರ್ಷ ತಡೆದುಕೊಂಡಿದೆ. ನಂತರ ಈ ವಿಚಾರವಾಗಿ ರಾಜ್ಯ ಸರ್ಕಾರ ಎಸ್ ಐಟಿ ಯನ್ನು ಜಾರಿಗೆ ತಂದಿತು. ಸರ್ಕಾರದ ಈ ಎಸ್ ಐಟಿ ರಚನೆ ಚಿಂತನೆಗೆ ಎಡಪಂಥೀಯರು ಧರ್ಮ ವಿರೋಧಿಗಳು ಕಾರಣವಾ ಎಂಬ ಅಂಶವನ್ನು ಸ್ಪಷ್ಟ ಪಡಿಸಬೇಕು. ಈ ಎಲ್ಲಾ ದ್ರೋಹಿಗಳಿಂದ ಧರ್ಮಸ್ಥಳ ಅಪವಿತ್ರವಾಯಿತು.ಇದರ ಹಿಂದೆ ಇನ್ಯಾವ ಸಂಘಟನೆ ಇದರ ಹಿಂದೆ ಇದೆ ಎಂಬುವುದು ಹೊರಗಡೆ ಬರಬೇಕು ಎಂದರು.