Dam details :ಜಿಲ್ಲೆಯಾಧ್ಯಂತ ಮಗೆ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಮಳೆ ಹೆಚ್ಚಾಗಿದ್ದರಿಂದ ಜಿಲ್ಲೆಯ ಅನೇಕ ತಾಲಕುಗಳ ಶಾಲೆ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ತುಂಗಾ, ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಗಳು ಉತ್ತಮ ಪ್ರಮಾಣದ ನೀರನ್ನು ಸಂಗ್ರಹಿಸಿವೆ. ಇಂದು ಬೆಳಗ್ಗೆ ಬಿಡುಗಡೆಯಾದ ವರದಿಯ ಪ್ರಕಾರ, ಪ್ರಸ್ತುತ ನೀರಿನ ಮಟ್ಟ, ಒಳಹರಿವು ಮತ್ತು ಹೊರಹರಿವಿನ ವಿವರಗಳು ಹೀಗಿವೆ:
Dam details ತುಂಗಾ ಜಲಾಶಯ
ತುಂಗಾ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಇಂದು ಜಲಾಶಯಕ್ಕೆ 26,278 ಕ್ಯೂಸೆಕ್ ಒಳ ಹರಿವು ಇದೆ. ಒಟ್ಟು 26,278 ಕ್ಯೂಸೆಕ್ ಹೊರ ಹರಿವು ಇದೆ. ಮೇಲ್ದಂಡೆಗೆ 1116 ಕ್ಯೂಸೆಕ್, ಎಡದಂಡೆಗೆ 169 ಕ್ಯೂಸೆಕ್, ಗೇಟ್ ಮೂಲಕ ಹೊಳೆಗೆ 24958 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ಲಿಂಗನಮಕ್ಕಿ ಜಲಾಶಯ
ಲಿಂಗನಮಕ್ಕಿ ಜಲಾಶಯದ ಒಳಹರಿವು 38,931 ಕ್ಯೂಸೆಕ್ಸ್ ಇದ್ದು ಒಟ್ಟು ಹೊರಹರಿವು 42,642 ಕ್ಯೂಸೆಕ್ಸ್ ಇದೆ. ಇದರಲ್ಲಿ ಗೇಟ್‌ಗಳಿಂದ 36,447 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
ಭದ್ರಾ ಜಲಾಶಯ
ಇವತ್ತು 12700 ಕ್ಯೂಸೆಕ್ ಒಳ ಹರಿವು ಇದೆ. 10281 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಈ ಪೈಕಿ ಬಲದಂಡೆಗೆ 2650 ಕ್ಯೂಸೆಕ್, ಎಡದಂಡೆಗೆ 150 ಕ್ಯೂಸೆಕ್, ಮೇಲ್ದಂಡೆಗೆ 700 ಕ್ಯೂಸೆಕ್, ಕ್ರಸ್ಟ್ ಗೇಟುಗಳ ಮೂಲಕ 4065 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.