Daily Horoscope Rashifal ಇಂದಿನ ರಾಶಿ ಭವಿಷ್ಯ: 2025ರ ಜುಲೈ 4ರ ನಿಮ್ಮ ದೈನಂದಿನ ಭವಿಷ್ಯ / ನಿಮ್ಮ ರಾಶಿಫಲ (ಜ್ಯೋತಿಷ್ಯ) ಆಧರಿಸಿ ಇಂದಿನ ದಿನ ಹೇಗಿರಲಿದೆ ಎಂಬುದನ್ನು ಇಲ್ಲಿ ಪರಿಶೀಲಿಸಿ.
ಮೇಷ ರಾಶಿ
ಇಂದು ಹೊಸ ಕೆಲಸ ಕಾರ್ಯಗಳನ್ನು ಆರಂಭಿಸಲು ಶುಭ ದಿನ. ಶುಭ ಸುದ್ದಿಯೊಂದು ಕೇಳಿ ಬರಲಿದೆ. ಆರ್ಥಿಕವಾಗಿ ಉತ್ತಮ ಪ್ರಗತಿಯನ್ನು ಕಾಣುವಿರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಕುಟುಂಬ ಸದಸ್ಯರೊಂದಿಗಿನ ವಿವಾದ ಬಗೆಹರಿಯಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈದಿನ ಹೊಸ ಭರವಸೆ ಮೂಡಲಿವೆ. ನಿಮ್ಮ ದೃಷ್ಟಿಕೋನ ಸ್ಪಷ್ಟವಾಗಿರುತ್ತವೆ.
ವೃಷಭ ರಾಶಿ Daily Horoscope Rashifal
ಇಂದು ಹೊಸ ಕೆಲಸ ಪ್ರಾರಂಭಿಸಲು ಉತ್ತಮ ದಿನ. ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ದೇವರ ದರ್ಶನ, ದಾರ್ಮಿಕ ಸ್ಥಳಗಳಲ್ಲಿ ಮಾನಸಿಕ ಶಾಂತಿ ಸಿಗಲಿದೆ. ಮನರಂಜನೆಯಲ್ಲಿ ಭಾಗಿಯಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ಈ ದಿನ ತೃಪ್ತಿಕರವಾಗಿರುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ.
ಮಿಥುನ ರಾಶಿ
ಸಂಬಂಧಿಕರೊಂದಿಗೆ ಸಣ್ಣಪುಟ್ಟ ವಿವಾದ ಉಂಟಾಗಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಟುಂಬದಲ್ಲಿ ಸ್ವಲ್ಪ ಒತ್ತಡದ ವಾತಾವರಣ ಇರಲಿದೆ. ಆಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗಿಕೊಳ್ಳುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ನಿಧಾನಗತಿ ಕಂಡುಬರುತ್ತದೆ.
ಕರ್ಕಾಟಕ ರಾಶಿ
ಇಂದು ಕೆಲಸಗಳು ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಒತ್ತಡ ಹೆಚ್ಚಾಗಲಿದೆ. ಆಪ್ತ ಮಿತ್ರರೊಂದಿಗೆ ಸಣ್ಣಪುಟ್ಟ ವಾದ ಹೆಚ್ಚಾಗಬಹುದು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಸಾಮಾನ್ಯ ಮತ್ತು ಖರ್ಚುಗಳು ಹೆಚ್ಚಾಗಲಿವೆ.

ಸಿಂಹ ರಾಶಿ
ಧನ ಲಾಭವನ್ನು ನಿರೀಕ್ಷಿಸಬಹುದು. ಕೈಗೊಂಡ ಕೆಲಸ ಸುಗಮವಾಗಿ ನಡೆಯಲಿವೆ. ಬಂಧುಮಿತ್ರರ ಭೇಟಿ ಮತ್ತು ಔತಣಕೂಟಗಳಲ್ಲಿ ಭಾಗಿಯಾಗುವ ಅವಕಾಶ ಸಿಗಲಿದೆ. ಸಂದರ್ಶನಗಳಲ್ಲಿ ಯಶಸ್ಸು ಕಾಣುವಿರಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ.
ಕನ್ಯಾ ರಾಶಿ Daily Horoscope Rashifal
ಆರ್ಥಿಕ ಪರಿಸ್ಥಿತಿ ಸ್ವಲ್ಪ ನಿರಾಸೆಯನ್ನುಂಟು ಮಾಡಬಹುದು. ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಅತಿಯಾದ ಕೆಲಸದ ಒತ್ತಡವಿರುತ್ತದೆ. ಕೆಲಸ ಕಾರ್ಯಗಳಲ್ಲಿ ವಿಳಂಬವಾಗಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಎದುರಿಸಬೇಕಾಗಬಹುದು. ದೇವಾಲಯಗಳಿಗೆ ಭೇಟಿ ನೀಡುವಿರಿ.
ತುಲಾ ರಾಶಿ
ಉದ್ಯೋಗ ಮತ್ತು ವ್ಯವಹಾರದಲ್ಲಿ ತೃಪ್ತಿಕರ ಫಲಿತಾಂಶಗಳು ದೊರೆಯಲಿವೆ. ಆರ್ಥಿಕ ಲಾಭದ ಸಾಧ್ಯತೆ ಇದೆ. ಅಮೂಲ್ಯ ವಸ್ತುಗಳನ್ನು ಸಂಗ್ರಹಿಸುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ವಾಹನ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ.
ವೃಶ್ಚಿಕ ರಾಶಿ
ವ್ಯವಹಾರಗಳಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗಬಹುದು. ಖರ್ಚುಗಳು ಹೆಚ್ಚಾಗುತ್ತವೆ. ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಅನಾರೋಗ್ಯ ಕಾಡಬಹುದು. ಅತಿಯಾದ ಕೆಲಸದ ಒತ್ತಡವಿರುತ್ತದೆ. ಉದ್ಯೋಗದಲ್ಲಿ ಮೌನವೇ ಆಭರಣವಾಗುವುದು
ಧನು ರಾಶಿ
ಹೊಸ ಕೆಲಸಗಳನ್ನು ಆರಂಭಿಸಲು ಇದು ಉತ್ತಮ ಸಮಯ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ದೊರೆಯುತ್ತದೆ. ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸುವಿರಿ. ಉದ್ಯೋಗ ಮತ್ತು ವ್ಯವಹಾರಗಳು ಸುಗಮವಾಗಿ ನಡೆಯಲಿವೆ.
ಮಕರ ರಾಶಿ Daily Horoscope Rashifal
ಕೈಗೊಂಡ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಹಠಾತ್ ಆರ್ಥಿಕ ಲಾಭವನ್ನು ನಿರೀಕ್ಷಿಸಬಹುದು. ಹೊಸ ಉದ್ಯೋಗಾವಕಾಶಗಳು ಒದಗಿ ಬರಲಿವೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಫಲಿತಾಂಶಗಳು ದೊರೆಯುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಭರವಸೆದಾಯಕ ಬೆಳವಣಿಗೆಗಳು ಕಂಡುಬರುತ್ತವೆ.

ಆಧ್ಯಾತ್ಮಿಕ ಚಿಂತನೆಗಳಲ್ಲಿ ಹೆಚ್ಚು ಸಮಯ ಕಳೆಯುವಿರಿ. ದಿನದ ವಹಿವಾಟಿನಲ್ಲಿ ಸ್ವಲ್ಪ ನಿಧಾನಗತಿ ಇರಲಿದೆ. ಹಣಕಾಸಿನ ಖರ್ಚುಗಳು ಹೆಚ್ಚಾಗಬಹುದು. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನ ಹರಿಸಿ.ಉದ್ಯೋಗ ಮತ್ತು ವ್ಯವಹಾರದಲ್ಲಿ ಗೊಂದಲ ಎದುರಾಗಬಹುದು.
ಕೈ ಹಾಕಿದ ಕೆಲಸ ನಿಧಾನವಾಗಿ ನಡೆಯುತ್ತವೆ. ಖರ್ಚುಗಳು ಹೆಚ್ಚಾಗುತ್ತವೆ. ಸ್ನೇಹಿತರೊಂದಿಗೆ ಸಣ್ಣಪುಟ್ಟ ವಾದಗಳು ಉಂಟಾಗಬಹುದು. ಆರೋಗ್ಯ ಸಮಸ್ಯೆಗಳು ಕಾಡಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಒತ್ತಡ ಅನುಭವಿಸಬಹುದು.
Daily Horoscope Rashifal July 4 2025 Daily horoscope, Kannada horoscope, today’s rashibhavishya, July 4 2025 horoscope, astrology predictions, Mesha, Vrishabha, Mithuna, Karka, Simha, Kanya, Tula, Vrischika, Dhanu, Makara, Kumbha, Meena, Rashi phala
