ಶಿಕಾರಿಪುರದಲ್ಲಿ ಮೂವರು ಮಹಿಳಾ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ajjimane ganesh

Chain Snatching Case:  3 Women Accused Sentenced to Jail  ಶಿಕಾರಿಪುರದಲ್ಲಿ ಮೂವರು ಮಹಿಳಾ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಶಿಕಾರಿಪುರ: ತಾಲ್ಲೂಕಿನ ತೊಗರ್ಸಿ ಗ್ರಾಮದಲ್ಲಿ ನಡೆದಿದ್ದ ಸರಗಳವು ಪ್ರಕರಣದಲ್ಲಿ ಮೂವರು ಮಹಿಳಾ ಆರೋಪಿಗಳಿಗೆ ಶಿಕಾರಿಪುರದ ನ್ಯಾಯಾಲಯ ಜೈಲು ಶಿಕ್ಷೆ (Imprisonment) ವಿಧಿಸಿದೆ.

2018ರ ಫೆಬ್ರವರಿ 26ರಂದು ಈ ಘಟನೆ ನಡೆದಿತ್ತು. ತೊಗರ್ಸಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಗುಂಡಗಟ್ಟಿ ಗ್ರಾಮದ ಈರಮ್ಮ ಅವರ ಬಂಗಾರದ ಸರವನ್ನು (Gold Chain) ಆರೋಪಿಗಳು ಕದ್ದಿದ್ದರು.

Chain Snatching Case:  3 Women Accused Sentenced to Jail 
Chain Snatching Case:  3 Women Accused Sentenced to Jail

ಪ್ರಕರಣ ದಾಖಲಿಸಿಕೊಂಡಿದ್ದ ಶಿರಾಳಕೊಪ್ಪ ಪೊಲೀಸ್ ಠಾಣೆಯ ಪೊಲೀಸರು, ಮಲ್ಲವ್ವ, ದೇವಕ್ಕ, ಮತ್ತು ಯಲ್ಲವ್ವ ಎಂಬ ಮೂವರು ಮಹಿಳೆಯರನ್ನು ಬಂಧಿಸಿ, ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (Charge Sheet) ಸಲ್ಲಿಸಿದ್ದರು.

today news paper july 24 today news paper  july 24
today news paper  july 24

Chain Snatching Case:  3 Women Accused Sentenced to Jail

ಶಿಕಾರಿಪುರ ಪಟ್ಟಣದ 1ನೇ ಸಿಜೆ, ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಧನಂಜಯ ಹೆಗಡೆ ಅವರು ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. 

ಆರೋಪಿಗಳಿಗೆ 6 ತಿಂಗಳ ಸಾದಾ ಶಿಕ್ಷೆ ಮತ್ತು ತಲಾ ₹5,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 1 ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ ವಕೀಲ ಜಿ.ಎಂ. ರಾಜಶೇಖರ್ ಅವರು ವಾದ ಮಂಡಿಸಿದ್ದರು.

ಸರಗಳವು, ಶಿಕಾರಿಪುರ, ಜೈಲು ಶಿಕ್ಷೆ, ತೊಗರ್ಸಿ, ನ್ಯಾಯಾಲಯ,Chain Snatching, Shikaripur, Jail Sentence, Togarsi, Court Verdict, #ಸರಗಳವು #ChainSnatching #Shikaripur 

 

Share This Article